ನೆಲ್ಯಾಡಿ: ಹೊರ ಜಿಲ್ಲೆಯ ಜನರನ್ನು ಕರೆತಂದು ನೆಲ್ಯಾಡಿ ಸಮೀಪದ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಯ ಎಂಬಲ್ಲಿರುವ ಮೊರ್ಯ ಎಂಬ ಕ್ರೈಸ್ತ ಪಾರ್ಥನಾ ಮಂದಿರ/ ಧ್ಯಾನ ಮಂದಿರದಲ್ಲಿ ಮತಾಂತರ ಚಟುವಟಿಕೆ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ ಹಿನ್ನೆಲೆ ಜೂ.4 ರಂದು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಪೊಲೀಸರ ಪರಿಶೀಲನೆಯ ವೇಳೆ ಶಿವಮೊಗ್ಗ ಜಿಲ್ಲೆಗೆ ಸೇರಿದ 27 ಮಂದಿ ಪತ್ತೆಯಾಗಿದ್ದರು. ಇದರಲ್ಲಿ 18 ಹೆಂಗಸರು, 8 ಗಂಡಸರು ಹಾಗೂ ಹಾಗು ಓರ್ವ 6 ವರ್ಷದ ಬಾಲಕ ಸೇರಿದ್ದ. ಇವರನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ತಾವು ಪ್ರಾರ್ಥನಾ ಮಂದಿರಕ್ಕೆ ಸ್ವ ಇಚ್ಚೆಯಿಂದ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
“ತಾವು ಶಿವಮೊಗ್ಗ ಜಿಲ್ಲೆಯವರು. ನಮ್ಮಲ್ಲಿ ಮಧ್ಯ ವ್ಯಸನಿಗಳು ಹಾಗು ಮಾನಸಿಕ ಖಾಯಿಲೆಗೆ ತುತ್ತಾದವರು ಇದ್ದಾರೆ. ಇಲ್ಲಿ ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಅಗುವುದಾಗಿ youtube ನಲ್ಲಿ ಮಾಹಿತಿ ಹಾಕಲಾಗಿದ್ದು , ಅದನ್ನು ವೀಕ್ಷಿಸಿ ಇಲ್ಲಿಗೆ ಬಂದಿದ್ದೇವೆ ಎಂದು ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಸ್ವಂತ ಖರ್ಚಿನಲ್ಲಿ ಕೆ. ಎಸ್.ಆರ್. ಟಿ. ಸಿ ಬಸ್ಸಿನಲ್ಲಿ ಮೋರಿಯ ಧ್ಯಾನ ಕೇಂದ್ರಕ್ಕೆ ಆಗಮಿಸಿರುವುದಾಗಿಯೂ, ಯಾರೂ ಕೂಡ ನಮ್ಮನ್ನುವ ಇಲ್ಲಿಗೆ ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿರುವುದಿಲ್ಲ ಹಾಗೂ ಯಾವುದೇ ಮತಾಂತರಕ್ಕೆ ಒಳಪಡಿಸಿರುವುದಿಲ್ಲ ಎಂಬುವುದಾಗಿಯೂ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.


























