ಪುತ್ತೂರು: ರಸ್ತೆ ದಾಟುವಾಗ ಮಹಿಳೆಯೋರ್ವರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಹಾರಾಡಿಯಲ್ಲಿ ನಡೆದಿದೆ.

ನಗರ ಸಭೆ ಪೌರ ಕಾರ್ಮಿಕೆ, ಬನ್ನೂರು ನಿವಾಸಿ ಸೀಲವ್ವ ಎಂಬ ಮಹಿಳೆಯೋರ್ವರು ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಪಡೀಲ್ ಸಮೀಪ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಮಹಿಳೆ ಗಂಭೀರ ಗಾಯಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಪಡೀಲ್ ಸಮೀಪ ಸಾರ್ವಜನಿಕರು ಹಿಡಿದು ನಿಲ್ಲಿಸಿದ್ದಾರೆನ್ನಲಾಗಿದೆ.


























