ಸುಳ್ಯ: ಕಾರು ಸ್ಕಿಡ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ-ಕಾಸರಗೋಡು ಗಡಿ ಭಾಗ ಪರಪ್ಪೆ ಎಂಬಲ್ಲಿ ನಡೆದಿದೆ.

ಸುಳ್ಯ ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರಿ ಶಾಹಿನ (28) ಮತ್ತು ಆಕೆಯ ಪುತ್ರಿ ಶಜ್ಹಾ ಮೃತರು.

ಶಾಹಿನಾ ರವರು ಗಾಳಿಮುಖದಲ್ಲಿರುವ ತಮ್ಮ ಪತಿಯ ಮನೆಯಿಂದ ಸುಳ್ಯಕ್ಕೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಇತರರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ..




























