ಪುತ್ತೂರು : ಚಂದ್ರಯಾನ-3 ಹಾಗೂ 18 ವರ್ಷ ವಯಸ್ಸಿನ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ FIDE ಚೆಸ್ ವರ್ಲ್ಡ್ ಕಪ್ ನಲ್ಲಿ ಈ ಎರಡು ಕ್ಷಣಗಳಲ್ಲಿ ಭಾರತಕ್ಕೆ ಗೆಲುವು ಸಿಗಲೆಂದು ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತಿಲ ಪರಿವಾರದ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಭಾರತ ಪಾಲಿಗೆ ಎರಡು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿರುವ ಕ್ಷಣಗಳಾದ 18 ವರ್ಷ ವಯಸ್ಸಿನ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ FIDE ಚೆಸ್ ವರ್ಲ್ಡ್ ಕಪ್ ನ ನಂಬರ್ ವನ್ ರ‍್ಯಾಂಕ್ ನ ಮ್ಯಾಗ್ನಸ್ ಕಾರ್ಲ್ ಸನ್ ಜೊತೆಗೆ 2ನೇ ಸುತ್ತಿನ ಆಟ ನಡೆಯಲಿದೆ.

ಈಗಾಗಲೇ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತ ಆಗಿದ್ದು, ಇಂದು ಸಂಜೆ 6 ಸಮಯಕ್ಕೆ ಚಂದ್ರಯಾನ-3 ನೌಕೆ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ಮೂಲಕ ಭಾರತ ಇತಿಹಾಸ ಬರೆಯಲಿದೆ. ಈ ಎರಡು ಕ್ಷಣಗಳಲ್ಲಿ ಭಾರತಕ್ಕೆ ಗೆಲುವು ಸಿಗಲೆಂದು ಪುತ್ತಿಲ ಪರಿವಾರದ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತ, ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ರಾಜ್ ಶೆಟ್ಟಿ , ಪ್ರವೀಣ್ ಭಂಡಾರಿ, ರವಿ ಶೆಟ್ಟಿ, ಪ್ರಕಾಶ್, ಶನ್ಮಿತ್, ಮನೀಶ್ ಬನ್ನೂರು, ದಯಾನಂದ ರೈ ಈ ಸಂದರ್ಭ ಉಪಸ್ಥಿತರಿದ್ದರು.



























