ಪುತ್ತೂರು : ತೋಟದಲ್ಲಿ ನೇಣು ಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್ಯಾಪು ಗ್ರಾಮದ ವಳತ್ತಡ್ಕ ಕೊಪ್ಪಳ ಎಂಬಲ್ಲಿ ನಡೆದಿದೆ.

ಮೂಲತಃ ತಿಂಗಳಾಡಿ ನಿವಾಸಿ, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಕೊಪ್ಪಳದಲ್ಲಿ ವ್ಯಾಸ್ತವ್ಯವಿರುವ ಸಿದ್ಧೀಕ್ ಅನ್ಸಾರ್ (32) ಮೃತರು.
ಮೃತರು ಪತ್ನಿ, ಮಕ್ಕಳು, ಮನೆಯವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



























