ಹಾಸನ: ಮಿಕ್ಸಿಯಲ್ಲಿ ಮಜ್ಜಿಗೆ ಕಡೆಯುವಾಗ ವಿದ್ಯುತ್ ಶಾಕ್ ತಗುಲಿ ಶರತ್(25) ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರದಲ್ಲಿ ನಡೆದಿದೆ.
ಶರತ್ ಮೂಲತಃ ಆಲೂರು ತಾಲೂಕಿನ ಬೆಳ್ಳೂರು ಗ್ರಾಮದವನಾಗಿದ್ದು ಹಾಸನದ ಸುವರ್ಣ ರಿಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.