ಬಂಟ್ವಾಳ: ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಗಾಣದಪಾಲು ಎಂಬಲ್ಲಿ ನಡೆದಿದೆ.
ಗಾಣದಪಾಲು ನಿವಾಸಿ ಪದ್ಮನಾಭ ಪೂಜಾರಿ ಅವರ ಪತ್ನಿ ದೀಕ್ಷಿತಾ ಅವರು ಮೂರು ಮಕ್ಕಳಿಗೆ ಅ.19 ರಂದು ಮಧ್ಯಾಹ್ನ 12.45 ರ ವೇಳೆ ಜನ್ಮ ನೀಡಿದ್ದಾರೆ. ಪ್ರಸ್ತುತ ತಾಯಿ ಮತ್ತು ಮೂರು ಮಕ್ಕಳು ಆರೋಗ್ಯದಿಂದ್ದಾರೆ.

ಮೊದಲು ಗಂಡು ಮಗುವಿಗೆ ಜನ್ಮ ನೀಡಿದ ಆಕೆ ಬಳಿಕ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಡಾ. ವಿನೀತ ಶೆಟ್ಟಿ ಅವರ ತಂಡ ಸಿಸೇರಿಯನ್ ಮೂಲಕ ಮಕ್ಕಳನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಮೂವರು ಮಕ್ಕಳ ತೂಕ ಕಡಿಮೆ ಇರುವುದರಿಂದ ಮಕ್ಕಳನ್ನು ಐಸಿಯು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ಸುಮಾರು ಒಂದುವರೆ ತಿಂಗಳಿನಿಂದ ದೀಕ್ಷಿತಾ ಅವರನ್ನು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ವಿಶೇಷ ಕಾಳಜಿಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ ನೋಡಿಕೊಂಡ ಸರಕಾರಿ ಆಸ್ಪತ್ರೆಯ ವೈದ್ಯರ ತಂಡಕ್ಕೆ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.


























