ಬಂಟ್ವಾಳ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ಕಲ್ಲಡ್ಕದ ನರಹರಿ ಸಮೀಪ ನಡೆದಿದೆ.

ಬೈಕ್ ಮತ್ತು ಬಿಜೆಪಿ ರ್ಯಾಲಿಯ ಪ್ರಚಾರದ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಮೃತ ಬೈಕ್ ಸವಾರನನ್ನು ಗುರುವಾಯನಕೆರೆ ಮೂಲದ ತರಕಾರಿ ನಾರಾಯಣ ಎಂಬವರ ಪುತ್ರ ವಿಜಿತ್ (35) ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು..



























