ಪುತ್ತೂರು : ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಬೆಳಿಯಪ್ಪ ಗೌಡ ಪುತ್ರ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡು ಶಾಖಾ ವ್ಯವಸ್ಥಾಪಕ ಜಯರಾಮ ಗೌಡ (38) ರವರು ಅಸೌಖ್ಯದಿಂದ ಜೂ.22 ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

2011ರಲ್ಲಿ ಸಹಕಾರ ಸಂಘಕ್ಕೆ ನೇಮಕಗೊಂಡಿದ್ದ ಜಯರಾಮ ಗೌಡ ರವರು 2018ರಲ್ಲಿ ಪಾಲ್ತಾಡು ಶಾಖಾ ವ್ಯವಸ್ಥಾಪಕರಾಗಿ ನಿಯುಕ್ತಿಗೊಂಡಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಕಳೆದ ಒಂದು ವರ್ಷದಿಂದ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜಯರಾಮ ಗೌಡ ರವರು ಕೊಳ್ತಿಗೆ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ ಸಕ್ರೀಯ ಸದಸ್ಯರಾಗಿರುವ ಇವರು ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದರು.
ಅವಿವಾಹಿತರಾಗಿರುವ ಇವರು ತಂದೆ ಬೆಳಿಯಪ್ಪ ಗೌಡ, ತಾಯಿ ತಾರಾವತಿ, ಸಹೋದರರಾದ ಗುರುಪ್ರಸಾದ್, ಪೊಲೀಸ್ ಸಿಬ್ಬಂದಿ ಹರಿಪ್ರಸಾದ್, ನಾದಿನಿಯರಾದ ವನಿತಾ ಹಾಗೂ ಶ್ರೀದೇವಿ ರನ್ನು ಅಗಲಿದ್ದಾರೆ.


























