ಚುನಾವಣಾ ಬಾಂಡ್ ಸಂವಿಧಾನ ಬಾಹೀರ, ಅದನ್ನು ರದ್ದು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚುನಾವಣಾ ಬಾಂಡ್ ಸ್ಕೀಮ್ನ ಕಾನೂನು ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯದ ಇಂದು ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು..?
ಚುನಾವಣಾ ಬಾಂಡ್ಗಳಿಂದ ಜನರ ಮೂಲಭೂತ ಹಕ್ಕಿಗೆ ಧಕ್ಕೆ ಆಗಲಿದೆ. ಮತದಾನದ ಹಕ್ಕಿಗೆ ಚುನಾವಣಾ ಬಾಂಡ್ ವಿವರ ನೀಡುವ ಅಗತ್ಯ ಇದೆ. ಚುನಾವಣಾ ಬಾಂಡ್ಗಳು ಆರ್ಟಿಐಗೆ ವಿರುದ್ಥವಾಗಿದೆ. ಚುನಾವಣಾ ಬಾಂಡ್ಗಳ ಅನಾಮಧೇಯ ವಿವರ ಮತದಾರರ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.
ಚುನಾವಣಾ ಬಾಂಡ್ಗಳು ಕೊಡು-ಕೊಳ್ಳುವಿಕೆಗೆ ನಾಂದಿ ಹಾಡುತ್ತವೆ. ಚುನಾವಣಾ ಬಾಂಡ್ಗಳು ಆರ್ಟಿಐಗೆ ವಿರುದ್ಥವಾಗಿವೆ. ಚುನಾವಣಾ ಬಾಂಡ್ನಿಂದ ಕಪ್ಪು ಹಣ ಚಲಾವಣೆಗೆ ಅವಕಾಶ ನೀಡಿದಂತಾಗುತ್ತದೆ. ಅನಾಮಧೇಯ ಚುನಾವಣಾ ಬಾಂಡ್ ಸ್ಕೀಮ್ ಗಳು ಸಂವಿಧಾನದ 19(1)(ಎ) ಹಾಗೂ ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಆಗಿದೆ ಎಂದು ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ನ ಸಂವಿಧಾನಿಕ ಪೀಠದಲ್ಲಿ 4-1 ತೀರ್ಪು ಪ್ರಕಟವಾಗಿದೆ. ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಒಂದೇ ನಿಲುವಿಗೆ ಬಂದಿದ್ದಾರೆ.


























