ಪುತ್ತೂರು: ನಗರಸಭಾ ವ್ಯಾಪ್ತಿಯ ಗುಂಪಕಲ್ಲು ವಿನಲ್ಲಿ ಗಾಳಿಗೆ ಶ್ವೇತಾ ಮತ್ತು ವಿಜಯ ರವರ ಮನೆಗೆ ತೆಂಗಿನಮರ ಬಿದ್ದು ಮನೆ ದ್ವಂಸವಾಗಿದ್ದು ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಮೇಲೆ ಬಿದ್ದಿರುವ ತೆಂಗಿನ ಮರವನ್ನು ತೆರವು ಮಾಡುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
