ಬೆಂಗಳೂರು: ಎಲ್ಲಾ ಪೋಷಕರು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡೋ ಕನಸು ಇಟ್ಟುಕೊಂಡಿರುತ್ತಾರೆ. ಆದ್ರೆ ಈ ದುಬಾರಿ ದುನಿಯಾದಲ್ಲಿ ಮಿಡ್ಲ್ ಕ್ಲಾಸ್ ಪೋಷಕರಿಗೆ ಭಾರೀ ಹೊಡೆತ ಬಿಳುತ್ತೆ. ಹೀಗಾಗಿ ಮದುವೆಗೆ ದುಡ್ಡು ಹೊಂದಿಸಲು ಪೋಷಕರು ಟೆನ್ಷನ್ನಲ್ಲಿ ಇರುತ್ತಾರೆ. ಆದರೆ ಇದೀಗ ಪೋಷಕರ ಕನಸು ನನಸು ಮಾಡಲು ಹೊಸ ಮಾರ್ಗವೊಂದು ಬಂದಿದೆ. ಈಗ ವೆಡ್ಡಿಂಗ್ ಪ್ಲಾನರ್‌ಗಳಿಂದ ಇಎಂಐ ಮದುವೆಯ ಟ್ರೆಂಡ್ ಶುರುವಾಗಿದೆ. ಅದುವೆ Marry Now Pay Later.
ಹೌದು, ಸಿಲಿಕಾನ್ ಸಿಟಿಯಲ್ಲಿ EMI ಮದುವೆ ಟ್ರೆಂಡ್ ಆಗ್ತಿದೆ. ದುಬಾರಿ ದುನಿಯಾದ ನಡುವೆ ವಧು-ವರರಿಗೆ ವೆಡ್ಡಿಂಗ್ ಪ್ಲಾನರ್ಗಳು ಆಫರ್ವೊಂದನ್ನು ಬಿಟ್ಟಿದ್ದಾರೆ. ಮದುವೆ ಮಾಡಿಕೊಳ್ಳುವುದಕ್ಕೆ ರೆಡಿ ಆಗಿರೋ ವಧು ವರರಿಗೆ EMI ಆಪ್ಷನ್ ನೀಡಲಾಗಿದೆ. ಸದ್ಯ 0% ಬಡ್ಡಿ ದರದಲ್ಲಿ EMIನಲ್ಲಿ ಮದುವೆ ಮಾಡಿಕೊಳ್ಳಬಹುದಾಗಿದೆ.

ಮದುವೆಗೆ ದುಡ್ಡು ಹೊಂದಿಸಲು ಸಾಧ್ಯವಾಗದೆ ಟೆನ್ಷನ್ ನಲ್ಲಿದ್ದವರಿಗೆ EMIನಲ್ಲಿ ಮದುವೆ ಮಾಡಬಹುದಾಗಿದೆ. ವೆಡ್ಡಿಂಗ್ ಪ್ಲಾನರ್ಗಳು ಇಎಂಐ ಆಪ್ಷನ್ ಕೊಟ್ಟಿದ್ದಾರೆ. ಕೆಲ ಅಗತ್ಯ ಡಾಕ್ಯುಮೆಂಟ್ಸ್ ಪಡೆದು EMIನಲ್ಲಿ ಹಣ ಪಾವತಿ ಮಾಡಲು ಅವಕಾಶ ನೀಡಲಾಗಿದೆ. EMI ಮ್ಯಾರೇಜ್ ಕಾನ್ಸೆಪ್ಟ್ ಹೊಸದಾಗಿರೋದರಿಂದ ಈಗ 0% EMIನಲ್ಲಿ ಮದುವೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಗ್ರಾಹಕರನ್ನ ಸೆಳೆಯಲು ವೆಡ್ಡಿಂಗ್ ಪ್ಲಾನರ್ಗಳು ಸಖತ್ ಪ್ಲಾನ್ ಮಾಡಿಕೊಂಡಿದ್ದಾರೆ. ಕೆಲ ವೆಡ್ಡಿಂಗ್ ಪ್ಲಾನರ್‌ಗಳಿಂದ 24 ತಿಂಗಳವರೆಗೆ EMI ಕಟ್ಟಲು ಅವಕಾಶ ನೀಡಲಾಗಿದೆ. ಆಯಾ ವೆಡ್ಡಿಂಗ್ ಪ್ಲಾನರ್ ಗಳಿಂದ ಬೇರೆ ಬೇರೆ ರೀತಿಯಲ್ಲಿ ಕಾಲಾವಕಾಶ ನೀಡಲಾಗುತ್ತದೆ.
ಇನ್ನೂ ಕೆಲ ವೆಡ್ಡಿಂಗ್ ಪ್ಲಾನರ್ಗಳು ಅವರೇ ಅಥವಾ ಫೈನಾನ್ಸಿಯಲ್ ಕಂಪನಿ ಬ್ಯಾಂಕ್ಗಳಿಂದ ಇಎಂಐ ಸಾಲ ಸೌಲಭ್ಯ ನೀಡುತ್ತಿದ್ದಾರೆ. ವಧು-ವರನ ಹಿನ್ನೆಲೆ ಚೆಕ್ ಮಾಡಿದಾಗ, ಇವರಿಂದ ಮುಂದೆಯೂ ನಮಗೆ ಲಾಭವಾಗುತ್ತೆಂದು ಅನ್ಸಿದ್ರೆ, ಇವರಿಗೆ ಉತ್ತಮ ಸೌಲಭ್ಯ ಕೊಟ್ಟು EMIನಲ್ಲಿ ಮದ್ವೆ ಮಾಡ್ಸಿ ಕೊಟ್ರೆ, ಇವರಿಂದ ಮುಂದೆ ನಮಗೆ ಮತ್ತಷ್ಟೂ ಕಸ್ಟಮರ್ ಸಿಗ್ತಾರೆಂದು ಅನ್ಸಿದ್ರೆ, ಎಷ್ಟು ಲಕ್ಷ ಖರ್ಚು ಮಾಡೋದಕ್ಕೆ ವೆಡ್ಡಿಂಗ್ ಪ್ಲಾನರ್ಗಳು ತಯಾರಿ ನಡೆಸುತ್ತಿದ್ದಾರೆ..