ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಪುತ್ತೂರು ಪೇಟೆ ಸಿಂಗಾರಗೊಂಡಿದ್ದು ಬೊಳ್ವಾರಿನಿಂದ ಏಳ್ಮುಡಿ ವರೆಗೆ ವರೆಗೆ ದೀಪಾಲಂಕಾರ ವನ್ನು ವಿಹಿಂಪ ಬಜರಂಗದಳ ಮಾಡಿದ್ದು ಪುತ್ತೂರು ಪೇಟೆ ಕಂಗೊಳಿಸುತ್ತಿದೆ.
ಪುತ್ತೂರು ದೇವಸ್ಥಾನಕ್ಕೆ ಬರುವ ಮುಖ್ಯ ರಸ್ತೆಯ ಬಳಿ ಸ್ವಾಗತ ದ್ವಾರವು ವಿಹಿಂಪ ವತಿಯಿಂದ ಹಾಕಲಾಗಿದ್ದು ಜಾತ್ರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ.

ಕಳೆದ ನಾಲ್ಕು ವರುಷಗಳಿಂದ ಈ ಕಾರ್ಯವನ್ನು ಭಕ್ತರ ಸಹಕಾರದಿಂದ ಮಾಡುತ್ತಿದ್ದು ಎಲ್ಲರೂ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಜಾತ್ರೆಯ ಸಂದರ್ಭ ಪೇಟೆಗೆ ಬೆಳಕು ಬರಬೇಕು ಮತ್ತು ಜಾತ್ರೆಗೆ ಇನ್ನಷ್ಟು ಮೆರುಗು ತರಬೇಕು ಎನ್ನುವ ಕಾರಣಕ್ಕೆ ಈ ಕಾರ್ಯ ಮಾಡುತ್ತಿದ್ದೇವೆ – ಮುರುಳೀಕೃಷ ಹಸಂತಡ್ಕ
