ಪುತ್ತೂರು ವಕೀಲರ ವಾರ್ಷಿಕ ಕ್ರೀಡಾಕೂಟ ಎಪಿಎಲ್ ಸೀಸನ್ ಸೆವೆನ್ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಜಸ್ಟಿಸ್ ವಿಶ್ವಜೀತ್ ಶೆಟ್ಟಿ ಮತ್ತು ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಶಿವಶಂಕರೇಗೌಡ ಅವರು ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದರು.
ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಶ್ರೀ ರವೀಂದ್ರ ಎಂ ಜೋಶಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶರಾದ ಗೌರವಾನ್ವಿತಸರಿತಾ ಡಿ ಅವರು ಮುಖ್ಯ ಅತಿಥಿಯಾಗಿದ್ದರು ಮಾಜಿ ಎಡಿಷನಲ್ ಅಡ್ವಕೇಟ್ ಜನರಲ್ ಮತ್ತು ಕ್ಯಾತ ವಕೀಲರಾದ ಅರುಣ್ ಶಾಮ ಅವರು ಮುಖ್ಯ ಅತಿಥಿಯಾಗಿದ್ದರು.
ಪುತ್ತೂರಿನ ಸಿವಿಲ್ ಹಿರಿಯ ವಿಭಾಗದ ನ್ಯಾಯಾಧೀಶರಾದ ಶ್ರೀಮತಿ ಪ್ರಿಯಾ ರವಿ ಜೋಗ್ಳೇಕರ್ ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಧೀಶರಾದ ಶ್ರೀ ದೇವರಾಜ್ ಎಚ್ಆರ್ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರಾದ ಶ್ರೀಮತಿ ಅರ್ಚನಾ ಕೆ ಹುಣ್ಣಿತ ಮಾನ್ಯ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರಾದ ಗೌರವಾನ್ವಿತ ಎಚ್ ಶಿವಣ್ಣ ಆರ್ ಅವರು ಗೌರವ ಉಪಸ್ಥಿತರಿದ್ದರು.
ರಿಝರ್ಬ್ಯಾಂಕ್ ಮಾಜಿ ನಿರ್ದೇಶಕರು ವಕೀಲರು ಆದ ನವೀನ್ ಬಂಡಾರಿ ಅವರು ಗೌರವ ಉಪಸ್ಥಿತರಿದ್ದರು ತೂರು ವಕೀಲರಕೀಲರ ಸಂಘದ ಅಧ್ಯಕ್ಷರಾದ ಜಿ ಜಗನಾಥ್ರೀ ಅವರು ಅಧ್ಯಕ್ಷತೆ ವಹಿಸಿದ್ದರು. ಮಾನ್ಯ ಜಸ್ಟಿಸ್ ವಿಶ್ವಜಿತ್ ಶೆಟ್ಟಿ ಅವರು ಮಾತನಾಡಿ ವಕೀಲರಿಗಳಿಗೆ ಮತ್ತು ನ್ಯಾಯಾಧೀಶರುಗಳಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರಾಮುಖ್ಯವಾಗಿದ್ದು ಅದನ್ನು ಉಳಿಸಿಕೊಳ್ಳುವಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಮತ್ತು ಪುತ್ತೂರು ವಕೀಲರ ಸಂಘದ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಮತ್ತೊಬ್ಬ ನ್ಯಾಯ ನ್ಯಾಯಮೂರ್ತಿ ಶ್ರೀ ಶಿವಶಂಕರೇಗೌಡ ಅವರ ಮಾತನಾಡಿ ಅವರು ಇಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ಸಮಯವನ್ನು ನೆನಪಿಸಿಕೊಂಡು ವಕೀಲರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಹೊಸಕೋರ್ಟಿನ ಕಾಮಗಾರಿಯ ಬಗ್ಗೆ ಅವರು ಮತ್ತು ವಕೀಲರುಗಳು ಒಡಗೂಡಿ ಮಾಡಿದ ಕೆಲಸಗಳನ್ನು ಮತ್ತು ನ್ಯಾಯಾಲಯ ನ್ಯಾಯಾಧೀಶರು ಮತ್ತು ವಕೀಲರುಗಳ ನಡುವಿನ ಒಳ್ಳೆಯ ವಾತಾವರಣ ಶೀಘ್ರಮತ್ತು ಉತ್ತಮ ನ್ಯಾಯದಾನಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು.
ವಕೀಲರ ಸಂಘದ ಪರವಾಗಿ ಇಬ್ಬರು ನ್ಯಾಯಮೂರ್ತಿಗಳನ್ನು ಗೌರವಿಸಲಾಯಿತು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮಾತನಾಡಿ ಹೊಸ ನ್ಯಾಯಾಲಯದ ಕೆಲಸ ಕಾರ್ಯಗಳ ಬಗ್ಗೆ ಮತ್ತು ವಕೀಲರ ಸಂಘದ ಸಹಕಾರದ ಬಗ್ಗೆ ಮಾತನಾಡಿದರು.
ನಂತರ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಖ್ಯಾತ ವಕೀಲರಾದ ಶ್ರೀ ವಿಕ್ರಮ್ ಹೆಗಡೆ ಮತ್ತು ಮಾಜಿ ಅಧ್ಯಕ್ಷರಾದ ಅಶೋಕ ಆರಿಗ ಮತ್ತು ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಬಂಡಾರಿ ಮತ್ತು ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ಅವರು ಇದ್ದರು.
ಅಶೋಕ್ ಕುಮಾರ್ ರವರು ಮಾತನಾಡಿ ವಕೀಲರು ಸಾಮಾಜಿಕ ಕಲಕಲಿ ಉಳ್ಳವರು ಬ್ರಷ್ಟಾಚಾರವನ್ನು ಹತ್ತಿಕುವಲ್ಲಿ ವಕೀಲರ ಪಾತ್ರ ಖಂಡಿತ ಬೇಕು ಮತ್ತು ಹೊಸ ನ್ಯಾಯಾಲಯದ ವಕೀಲರ ಭವನಕ್ಕೆ ಅನುದಾನಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು ಶಾಸಕರನ್ನು ವಕೀಲರ ಸಂಘದ ಪರವಾಗಿ ಗೌರವಿಸಲಾಯಿತು.
ಅಶೋಕ್ ಆರಿಗ ಕಿಶೋರ್ ಬಂಡಾರಿ ಹೈಕೋರ್ಟ್ ವಕೀಲರಾದ ಅರುಣ ಶಾಮ್ ಸಂದರ್ಭೋಚಿತವಾಗಿ ಮಾತನಾಡಿದರು ಬೂದಿಯಾರ್ ರಾಧಾಕೃಷ್ಣ ರೀ ಮತ್ತುಹಲವಾರು ಗಣ್ಯರು ವಕೀಲರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರ ನಾಲ್ಕು ಕ್ರಿಕೆಟ್ ತಂಡಗಳ ಮಾಲಕರು ಮತ್ತು ತ್ರೋಬಾಲ್ ತಂಡಗಳ ಮಾಲಕರು ಮತ್ತು ಎಲ್ಲಾ ಆಟಗಾರರನ್ನು ಗೌರವಿಸಲಾಯಿತು ನ್ಯಾಯಾಧೀಶರನ್ನು ಒಳಗೊಂಡ ಜುಡಿಶಿಯಲ್ ಲೆವೆನ ಮತ್ತು ಹಿರಿಯ ವಕೀಲರುಗಳ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು ವಿಜೇತರಿಗೆ ಟ್ರೋಪಿಯನ್ನು ನೀಡಲಾಯಿತು.