ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಮೈದಾನದಲ್ಲಿ ಅಪರಿಚಿತ ವಲಸೆ ಕಾರ್ಮಿಕ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಅವರನ್ನು ಸುಮಾರು ಐವತ್ತರಷ್ಟಿದ್ದ ಗುಂಪು ಹೊಡೆದು ಹತ್ಯೆಗೈದಿದ್ದ ಘಟನೆಯ ಬೆನ್ನಲ್ಲೇ ಬಜಪೆಯಲ್ಲಿ ಯುವಕನೋರ್ವನ ಕೊಲೆ ನಡೆದಿರುವ ಬಗ್ಗೆ ವರದಿಯಾಗಿದೆ.

ಸುಮಾರು 4ರಿಂದ 5 ಮಂದಿ ಇದ್ದ ತಂಡವು ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ದಾಳಿ ನಡೆಸಿರುವುದು ಮೊಬೈಲ್‌ನಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.
ಕಾರನ್ನು ಲಾರಿಯಿಂದ ಅಡ್ಡಗಟ್ಟಿ ಮಚ್ಚು ಲಾಂಗ್ ನಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಕೊಲೆಯಾದ ಯುವಕನನ್ನು ಸುಹಾಸ್ ಶೆಟ್ಟಿ ಎಂದು ತಿಳಿದುಬಂದಿದೆ. ಈತ ಸುರತ್ಕಲ್‌ನ ಮುಸ್ಲಿಂ ಯುವಕ ಮುಹಮ್ಮದ್ ಫಾಝಿಲ್‌ನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ.



























