ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದ ರಾತ್ರಿ ಲೋಕೇಶ್ ಕೋಡಿಕೆರೆ ಗ್ಯಾಂಗ್ ಪ್ರತಿಕಾರಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಕೋಡಿಕೆರೆ ಲೋಕೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕೇಶ್ ಕೋಡಿಕೆರೆ ಗ್ಯಾಂಗ್ ಕುಂಟಿಕಾನ ಬಳಿ ಮೀನು ವ್ಯಾಪಾರಿ ಯುವಕನನ್ನು ಅಟ್ಟಾಡಿಸಿ ಆತನ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಿತ್ತು.
ಉಳ್ಳಾಲ ನಿವಾಸಿ ಲುಕ್ಮಾನ್ ಹಲ್ಲೆಗೊಳಗಾಗಿದ್ದ ಮೀನು ವ್ಯಾಪಾರಿ. ಮೀನುಗಾರ ಮಹಿಳೆ ಬೊಬ್ಬೆ ಹಾಕಿದ ಹಿನ್ನೆಲೆಯಿಂದಾಗಿ ಮೀನು ವ್ಯಾಪಾರಿ ಬಚಾವ್ ಆಗಿದ್ದ. ಇನ್ನೋವಾ ಕಾರಿನಲ್ಲಿ ಬಂದು ಲೋಕೇಶ್ ಗ್ಯಾಂಗ್ ಆತನ ಮೇಲೆ ಅಟ್ಯಾಕ್ ಮಾಡಿತ್ತು.
ಈ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.