ವಿಟ್ಲ: ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ನಿಯಂತ್ರಣದ ಮುಂಜಾಗ್ರತೆಯ ಬಗ್ಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿದಿನ ರಾತ್ರಿ ಸಮಯದಲ್ಲಿ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳ ಮನೆಗೆ ಆಕಸ್ಮಿಕ ಭೇಟಿ ಮಾಡಿ ಅವರುಗಳನ್ನು ಖುದ್ದಾಗಿ ಚೆಕ್ ಮಾಡಿ ಅವರುಗಳ ಚಲನವಲನ ಹಾಗೂ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುತ್ತಿದ್ದು ಅವರಿಗೆ ಸೂಕ್ತ ಎಚ್ಚರಿಕೆಗಳನ್ನು ನೀಡಿ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ತಿಳುವಳಿಕೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.