ಬಲವರ್ದಿತ ಆಹಾರದಿಂದ ಅತೀ ರಕ್ತದೊತ್ತಡವನ್ನು ನಿಯಂತ್ರಿಸುವ ಬಗ್ಗೆ ಪ್ರಬಂಧ ಮಂಡಿಸಿ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಡಾ. ನಿಶಿತ್ ಕುಮಾರ್ ಜೋಗಿ ಇವರು Ph.D. ಪದವಿ ಪಡೆದಿರುತ್ತಾರೆ. ಡಾ. ಮಮತಾ ಬಿ ಎಸ್ ಇವರ ಮಾರ್ಗದರ್ಶಕ ರಾಗಿದ್ದರು.
ಸುರೇಂದ್ರ ಜೋಗಿ ಮತ್ತು ಹರಿಣಾಕ್ಷಿ ಅವರ ಮಗನಾಗಿರುವ ನಿಶಿತ್ ಕುಮಾರ್ ಜೋಗಿ ಇವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ M.Sc. ಮುಗಿಸಿದ್ದು, ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ B.SC. ಮಾಡಿರುತ್ತಾರೆ. ಸರ್ಕಾರಿ ಪಿಯು ಕಾಲೇಜು ಬೆಳಿಯೂರುಕಟ್ಟೆ ಪುತ್ತೂರು ಇಲ್ಲಿ ಪಿಯುಸಿ ಮಾಡಿರುತ್ತಾರೆ.




























