ಬಂಟ್ವಾಳ: ಮರಳು ಅನ್ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಕೊಲೆಯಾದ ಮೃತ ಅಬ್ದುಲ್ ರಹಿಮಾನ್ ಮೃತದೇಹವನ್ನು
ಕುತ್ತಾರು ಮದನಿನಗರ ಮಸೀದಿಗೆ ತರಲಾಗಿದ್ದು ಮಸೀದಿಯಲ್ಲಿ ರಹೀಂ ಮೃತದೇಹಕ್ಕೆ ಇಸ್ಲಾಂ ಸಂಪ್ರದಾಯದಂತೆ ಮಯ್ಯತ್ ನಡೆಯಲಿದೆ.
ಆ ಬಳಿಕ ಕೊಲ್ತಮಜಲು ಗ್ರಾಮದ ಮನೆಗೆ ಮೃತದೇಹ ತರಲಿರೋ ಕುಟುಂಬಸ್ಥರು ಸ್ಥಳೀಯ ಮಸೀದಿಯಲ್ಲಿ ಅಬ್ದುಲ್ ರಹಿಮಾನ್ ಮೃತದೇಹದ ಅಂತಿಮಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ನಿಷೇದಾಜ್ಞೆ ಹೇರಲಾಗಿದೆ.



























