ಬೆಳ್ತಂಗಡಿ : ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜ್ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.
ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು, ಅಮ್ಚಾಡಿ ಗ್ರಾಮದ ಕೆಂಪುಗುಡ್ಡೆ ನಿವಾಸಿ ಗೋಪಾಲ ಗೌಡ ಮತ್ತು ಸುಪ್ರಭಾ ದಂಪತಿಯ ಮಗ ಹಿತೇಶ್ (17) ಮೃತಪಟ್ಟ ವಿದ್ಯಾರ್ಥಿ.



























