ಜೂನ್ ತಿಂಗಳಲ್ಲಿ ದೇವಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಶ್ರೀ ಮಹತೋಬಾರ ಮಹಾಲಿಂಗೇಶ್ವರ ದೇವರ ಪ್ರೇರಣೆಯಿಂದ ಪ್ರಾರಂಭಗೊಂಡ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಪುತ್ತೂರು ವತಿಯಿಂದ ಪುತ್ತೂರಿನಾದ್ಯಂತ ಮತ್ತು ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಉಡುಪಿಯಲ್ಲಿ ನಡೆಯುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣ ತರಗತಿಗಳನ್ನು ರಾಜ್ಯದ 14 ಜಿಲ್ಲೆಗಳಲ್ಲಿ ಪ್ರಾರಂಭಿಸುವ ಕುರಿತು ವಿಚಾರ ವಿನಿಮಯ ಬೆಂಗಳೂರಿನ ಶೇಷಾದ್ರಿಪುರಂ ನ ಯಾದವ ಸ್ಮೃತಿ ಸಭಾಂಗಣದಲ್ಲಿ ನಡೆಯಿತು.
ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕದ ವಿಭಾಗ ಪ್ರಮುಕರು, ವಿವಿಧ ಜಿಲ್ಲಾ ಸಂಯೋಜಕಾರ ತ್ರೈ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. ಜೂನ್ ಕೊನೆಯ ವಾರ ಭದ್ರಾವತಿಯ ಗೋಂದಿ ಆಶ್ರಮದಲ್ಲಿ ರಾಜ್ಯದ ಅರ್ಚಕರುಗಳಿಗೆ ವಿಶೇಷ ಕೌಶಲ್ಯವೃದ್ಧಿ ಕಾರ್ಯಾಗಾರ ನಡೆಸಲು ನಿರ್ಣಯಿಸಲಾಯಿತು.
ಹಾಗೆಯೇ ಜುಲೈ ತಿಂಗಳ ಮೂರನೇ ವಾರ ಸಮಿತಿಯ ವಿವಿಧ ತಾಲೂಕು ಸಂಯೋಜಕರ ಮತ್ತು ಕಾರ್ಯಕರ್ತರ ಒಂದು ದಿನದ ಕಾರ್ಯಾಗಾರ ನಡೆಯಲಿದೆ ಕರ್ನಾಟಕ ರಾಜ್ಯ ಸಂಯೋಜಕರಾದ ಶ್ರೀ ಮನೋಹರ್ ಮಠದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಭಾಗ ಪ್ರಮಖರು, ಹಾಗೆಯೇ ಮಂಗಳೂರು ನಗರ ಮಂಗಳೂರು ಗ್ರಾಮಾಂತರ ಪುತ್ತೂರು ಕೊಡಗು ದಾವಣಗೆರೆ ಚತ್ರದುರ್ಗ ಉಡುಪಿ ತುಮಕೂರು ಮೈಸೂರು ಮಂಡ್ಯ ಶಿವಮೊಗ್ಗ ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಸಂಯೋಜಕರು ಭಾಗವಹಿಸಿದ್ದರು.




























