ಕಳೆದ 17 ವರ್ಷಗಳಿಂದ ಕೈಗೆಟುಕದೇ ಇದ್ದ ಐಪಿಎಲ್ ಟ್ರೋಫಿ ಈ ಬಾರಿ ಆರ್ಸಿಬಿ ತಂಡವು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು 6 ರನ್ಗಳಿಂದ ಆರ್ಸಿಬಿ ಸೋಲಿಸಿ ಗೆಲುವು ಸಾಧಿಸಿದೆ. ಕೋಟ್ಯಾಂತರ ಆರ್ಸಿಬಿ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಈ ಗೆಲುವು ಆರ್ಸಿಬಿ ಅಭಿಮಾನಿಗಳ ಪಾಲಿಗೆ ಖುಷಿ ತಂದು ಕೊಟ್ಟಿದೆ. ಹೀಗಾಗಿ ಅಭಿಮಾನಿಗಳು ಪಟಾಕಿ ಸಿಡಿಸಿ,ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದರೆ ಈ ಪ್ರೇಮಿಗಳು ಆರ್ಸಿಬಿ ಗೆದ್ದ ಖುಷಿಗೆ ಪಬ್ಲಿಕ್ನಲ್ಲೇ ಲಿಪ್ ಟು ಲಿಪ್ ಕಿಸ್ ಮಾಡಿ ಈ ಗೆಲುವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.