ಪುತ್ತೂರು: ವಾಟ್ಸ್ ಆ್ಯಪ್ ನಲ್ಲಿ ಧರ್ಮ/ಕೋಮುಗಳ ನಡುವೆ ವೈರತ್ವ ಉಂಟು ಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ಓರ್ವನ ವಿರುದ್ಧ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ನ್ಯೂಸ್ 24×7 ಎಂಬ ಹೆಸರಿನ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ ವೈರತ್ವವನ್ನು ಉಂಟುಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ.
ಈ ಸಂದೇಶದಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ, ಸದ್ರಿ ಸಂದೇಶವನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಪ್ರಸಾರ ಮಾಡಿದಾತನ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 353(2) ಬಿಎನ್ಎಸ್ 2023ರಂತೆ ಪ್ರಕರಣ(ಅ.ಕ್ರ.:24/2025) ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.