ಒಂದೇ ಹುಡುಗಿ ಹಿಂದೆ ಇಬ್ರಿಬ್ರು ಹೋದ್ರೆ ಏನಾಗ್ಬೋದು ಹೇಳಿ? ಇಲ್ಲೂ ಅಂತಹದ್ದೇ ಒಂದು ಕತೆ ಆಗಿದೆ. ಪ್ರೀತ್ಸೆ ಪ್ರೀತ್ಸೆ ಅಂತ ಒಂದೇ ಹುಡುಗಿ ಹಿಂದೆ ಬಿದ್ದ ಇಬ್ಬರಲ್ಲಿ ಒಬ್ಬ ಪರಲೋಕ ಸೇರಿದ್ರೆ ಇನ್ನೊಬ್ಬ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ.
ಈ ಲವ್ ಸ್ಟೋರಿಯ ದುರಂತ ನಾಯಕನ ಹೆಸರು ದರ್ಶನ್. ಈ ಲವ್ ಸ್ಟೋರಿಗೆ ವಿಲನ್ ಆಗಿರೋನ ಹೆಸರು ವೇಣುಗೋಪಾಲ್. ಈ ದರ್ಶನ್ ಹಾಗೂ ವೇಣುಗೋಪಾಲ್ ಬೆಂಗಳೂರಿನ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಗ್ರಾಮದವರು. ಎಲ್ಲರಿಗೂ ಆಗೋ ಹಾಗೆ ಇವರಿಬ್ಬರಿಗೂ ಹದಿಹರೆಯದ ವಯಸ್ಸಲ್ಲಿ ಲವ್ ಆಗಿತ್ತು. ಆದ್ರೆ ಒಂದೇ ಹುಡುಗಿ ಮೇಲೆ ಇಬ್ಬರಿಗೂ ಲವ್ ಆಗಿ ಯಡವಟ್ಟಾಗಿ ಹೋಗಿತ್ತು..
ಈ ದರ್ಶನ್ ಮತ್ತು ವೇಣುಗೋಪಾಲ್ ಒಂದೇ ಯುವತಿಯ ಹಿಂದೆ ಬಿದ್ದಿದ್ದರು. ಈ ಹಿಂದೆ ಅದೇ ಯುವತಿಯನ್ನ ವೇಣುಗೋಪಾಲ್ ಪ್ರೀತಿ ಮಾಡುತ್ತಿದ್ದ. 5 ವರ್ಷಗಳ ಯುವತಿ ಮತ್ತು ವೇಣುಗೋಪಾಲ್ನ ಪ್ರೀತಿ 1 ವರ್ಷದ ಹಿಂದೆಯೇ ಮುರಿದು ಬಿದ್ದಿತ್ತು. 4 ತಿಂಗಳಿಂದ ಅದೇ ಯುವತಿ ಹಾಗೂ ದರ್ಶನ್ ನಡುವೆ ಪ್ರೀತಿ ಶುರುವಾಗಿತ್ತು. ಆದ್ರೂ ದರ್ಶನ್ ಹಾಗೂ ವೇಣುಗೋಪಾಲ್ ಸ್ನೇಹಿತರಾಗಿಯೇ ಇದ್ದರು. ನಿನ್ನೆ ಸಂಜೆ 7.30ರ ವೇಳೆಗೆ ಮನೆಯಲ್ಲಿದ್ದ ದರ್ಶನ್ಗೆ ವೇಣು ಕರೆಮಾಡಿದ್ದ.
ವೇಣುವಿನಿಂದ ಕರೆ ಬರ್ತಿದ್ದಂತೆ ಮನೆಯಿಂದ ಹೊರಗೆ ಹೋಗಿದ್ದ ದರ್ಶನ್.. ದರ್ಶನ್ನನ್ನ ಪಾರ್ಟಿ ಮಾಡೋಣ ಬಾ ಅಂತ ಕರೆದಿದ್ದ. ಪಾರ್ಟಿಗೆ ಹೋಗುವಾಗ ದರ್ಶನ್ ಪ್ರೇಯಸಿಗೆ ಕರೆ ಮಾಡಿ ವೇಣು ಕರೆಯುತ್ತಿದ್ದಾನೆ ಹೋಗಿ ಬರ್ತೀನಿ ಎಂದಿದ್ದ.
ಆದ್ರೆ ಪಾರ್ಟಿ ಮಾಡಿ ಕುಡಿಸಿ ದರ್ಶನ್ನನ್ನ ಮನಸೋ ಇಚ್ಛೆ ಚುಚ್ಚಿ ವೇಣು ಹತ್ಯೆಮಾಡಿದ್ದ. ನಂತರ ದರ್ಶನ್ ಕೊಲೆಯಾಗಿರುವ ಬಗ್ಗೆ ಆತನ ತಂದೆಗೆ ಯುವತಿಯಿಂದ ಮಾಹಿತಿ ಸಿಕ್ಕಿತ್ತು. ದರ್ಶನ್ ತಂದೆ ದೂರು ಆಧರಿಸಿ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿ ವೇಣುಗೋಪಾಲ್ನನ್ನ ಬಂಧಿಸಿದ್ರು.
ಒಟ್ನಲ್ಲಿ ಹದಿಹರೆಯದ ವಯಸ್ಸಲ್ಲಿ ಹುಟ್ಟಿದ ಪ್ರೀತಿ, ಪಜೀತಿ ಸೃಷ್ಟಿಸಿ ಒಬ್ಬನನ್ನ ಸಾವಿನ ಮನೆ ಸೇರಿಸಿದ್ರೆ ಮತ್ತೊಬ್ಬನನ್ನ ಸೆರೆವಾಸಕ್ಕೆ ಕಳುಹಿಸಿದೆ. ಇದ್ದೊಬ್ಬ ಮಗನ ಕಳೆದುಕೊಂಡ ದರ್ಶನ್ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.