ಯುವತಿಗೆ 6 ತಿಂಗಳವರೆಗೂ ಕೂಡಿ ಹಾಕಿ ಅಶ್ಲೀಲ ಸಿನಿಮಾದಲ್ಲಿ ನಟಿಸುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ಶ್ವೇತಾ ಖಾನ್, ಆರ್ಯನ್ ಅನ್ನೋ ಖತರ್ನಾಕ್ ಅಮ್ಮ-ಮಗನ ಮೇಲೆ ದೂರು ದಾಖಲಾಗಿದೆ.
23 ವರ್ಷದ ಯುವತಿ ಬಾರ್ ಡ್ಯಾನ್ಸರ್ ಕೆಲಸ ಮಾಡೋಕೆ ನಿರಾಕರಿಸಿದ್ದಾರೆ. ಶ್ವೇತಾ ಖಾನ್ ಹಾಗೂ ಆರ್ಯನ್ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಒತ್ತೆಯಾಳಾಗಿರಿಸಿಕೊಂಡು ಟಾರ್ಚರ್ ಮಾಡಿದ್ದಾರೆ. ಕೊಲ್ಕಾತ್ತದ ಹೌರಾ ಠಾಣೆಯಲ್ಲಿ ಸಂತ್ರಸ್ತೆ ಯುವತಿ ದೂರು ನೀಡುತ್ತಿದ್ದಂತೆ ಶ್ವೇತಾ ಖಾನ್, ಆರ್ಯನ್ ಎಸ್ಕೇಪ್ ಆಗಿದ್ದಾರೆ.
ಶ್ವೇತಾ ಖಾನ್, ಆಕೆಯ ಮಗ ಸಿನಿಮಾ ಪ್ರೊಡಕ್ಷನ್ ಯೂನಿಟ್ ನಡೆಸುತ್ತಿದ್ದರು. ಉದ್ಯೋಗದ ಹುಡುಕಾಟದಲ್ಲಿರುವ ಯುವತಿಯರನ್ನು ಟಾರ್ಗೆಟ್ ಮಾಡಿ ಸಂಬಳ ನೀಡಿ ತಾಯಿ, ಮಗ ಸೆಳೆಯುತ್ತಿದ್ದರು. ನಂತರ ಪೋರ್ನ್ ಸಿನಿಮಾದಲ್ಲಿ ನಟಿಸಲು ಒತ್ತಾಯ ಮಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ 23 ವರ್ಷದ ಯುವತಿಯನ್ನು 6 ತಿಂಗಳವರೆಗೂ ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲ ಶ್ವೇತಾ ಖಾನ್ ಮನೆಗೆ ಮಹಿಳೆಯರು ಬಂದರೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು. ಬಳಿಕ ಬಾರ್ ಡ್ಯಾನ್ಸರ್ ಕೆಲಸ ಮಾಡಲು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ.
ಆರೋಪಿ ಆರ್ಯನ್ ಲೈಂಗಿಕವಾಗಿ ಟಾರ್ಚರ್ ಕೊಟ್ಟು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸುತ್ತಿದ್ದ. ಬಲವಂತಾಗಿ ಸಂತ್ರಸ್ತೆಯ ಕೂದಲು ಕತ್ತರಿಸಿದ್ದ. ಸಿಗರೇಟ್ನಿಂದ ಸುಟ್ಟು ಹಲ್ಲೆ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ತಾಯಿ, ಮಗ ನನ್ನ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದು, ಪೊಲೀಸರು ನಾಪತ್ತೆಯಾಗಿರುವ ಆರೋಪಿ ತಾಯಿ, ಮಗನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಕಳೆದ ಜೂನ್ 6ರಂದು ತನ್ನ ಮನೆಗೆ ಬಂದಿರುವ ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಸಗೋರ್ ದತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವೇತಾ ಖಾನ್ ಹಾಗೂ ಮಗ ಆರ್ಯನ್ ಖಾನ್ ತನ್ನ ಫ್ಲ್ಯಾಟ್ನಲ್ಲೇ ಕೂಡಿ ಹಾಕಿ 6 ತಿಂಗಳು ಪ್ರತಿದಿನ ಟಾರ್ಚರ್ ಮಾಡಿದ್ದಾರೆ. ಜೊತೆಗೆ ಅಶ್ಲೀಲ ಫೋಟೋ ಶೂಟ್ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದರು.
ಶ್ವೇತಾ ಖಾನ್ ಅಲಿಯಾಸ್ ಫಲ್ತೂಶಿ ಬೇಗಂ ಅವರಿಗೆ 40 ವರ್ಷ ವಯಸ್ಸು. ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿದ್ದರು. ಇವೆಂಟ್ ಮ್ಯಾನೇಜ್ಮೆಂಟ್ & ಪ್ರೊಡಕ್ಷನ್ ಕಂಪನಿ ನಡೆಸುತ್ತಿದ್ದರು.
ಬಾರ್ಗಳಲ್ಲಿ ಡ್ಯಾನ್ಸರ್ ಆಗಿ ವರ್ಕ್ ಮಾಡುತ್ತಿದ್ದ ಶ್ವೇತಾ ಖಾನ್, ಸಿನಿಮಾ ಪ್ರೊಡಕ್ಷನ್ ಹೆಸರಲ್ಲಿ ಅಶ್ಲೀಲ ದಂಧೆ ನಡೆಸುತ್ತಿದ್ದರಂತೆ. ಮಾಡೆಲ್ ಆಗಬೇಕು ಅಂತ ಅಂದುಕೊಳ್ಳುತ್ತಿದ್ದ ಯುವತಿಯರಿಗೆ ಬಲೆ ಹಾಕುತ್ತಿದ್ದರು. ತನ್ನ ಏರಿಯಾದಲ್ಲಿ ಸಾಕಷ್ಟು ಹೆಸರು ಮಾಡಿರುವ ಶ್ವೇತಾ ಖಾನ್ ಅವರ ಮನೆಗೆ ರಾಜಕಾರಣಿಗಳು, ಗಣ್ಯರು ಬರ್ತಿದ್ರು ಎಂಬ ಆರೋಪವೂ ಕೇಳಿ ಬಂದಿದೆ.