ಕೊಳ್ನಾಡು ಗ್ರಾಮ ಪಂಚಾಯತ್ ಪಕ್ಕದಲ್ಲಿ ಹಾದುಹೋಗುವ ಪುಡ್ಕೆತ್ತೂರು ಮದಕ ಸಂಪರ್ಕ ರಸ್ತೆ ಸ್ಥಿತಿ ಶೋಚನೀಯವಾಗಿದೆ. ವಾಹನ ಸಂಚಾರ ಬಿಡಿ, ಕನಿಷ್ಟ ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆ ದುರಸ್ತಿ ಕಾಣದೆ ಸುಮಾರು ಎರಡು ದಶಕಗಳೇ ಕಳೆದಿದೆ ಎಂದು ಸ್ಥಳಿಯ ನಾಗರೀಕರು ಹೇಳುತ್ತಾರೆ. ರಸ್ತೆ ದುರಸ್ತಿ ಮಾಡಿಸುವಂತೆ ಕೊಳ್ನಾಡು ಗ್ರಾಮ ಪಂಚಾಯತಿಗೆ ಹಾಗೂ ಸ್ಥಳೀಯ ಸದಸ್ಯರಿಗೆ ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ಅನುಸೂಯ ಈಶ್ವರಚಂದ್ರ ಹಲವು ಬಾರಿ ಮನವಿ ಮಾಡಿದರೂ ಈತನಕ ಸ್ಪಂದನೆ ದೊರಕಿಲ್ಲ.
ಸುಮಾರು ಒಂದೂವರೆ ಕಿಲೋಮೀಟರ್ ದೂರದ ದಿನಂಪ್ರತಿ ನೂರಾರು ಮಂದಿ ಓಡಾಡುವ ರಸ್ತೆ ಇದು. ಬೇಸಗೆ ಕಾಲದಲ್ಲಿ ಧೂಳಿನಿಂದ ರಸ್ತೆಯಲ್ಲಿ ಸಾಗುವುದೇ ಕಷ್ಟವಾದರೇ ಮಳೆಗಾಲದಲ್ಲಿ ಕೆಸರು, ನೀರು, ರಸ್ತೆ ಬದಿ ಚರಂಡಿಗಳು ಇಲ್ಲದೇ ಓಡಾಡುವುದೇ ಕಷ್ಟ ಎಂದು ಸ್ಥಳೀಯರು ಹೇಳುತ್ತಾರೆ.