ಗುಜರಾತ್ನ ಸೋಶಿಯಲ್ ಮೀಡಿಯಾ ಸ್ಟಾರ್ ಕೀರ್ತಿ ಪಟೇಲ್ (Kirti Patel)ನನ್ನು ಪೊಲೀಸರು ಬಂಧಿಸಿದ್ದಾರೆ. 2024ರಲ್ಲಿ ಕೀರ್ತಿ ವಿರುದ್ಧ ಸುಲಿಗೆ, ಹನಿಟ್ರ್ಯಾಪಿಂಗ್ ಮತ್ತು ಐಟಿ ಕಾಯ್ದೆಯಡಿ ದೂರು ದಾಖಲಾಗಿತ್ತು..
ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಿದ್ದಾರೆ ಅಂತಾ ಸೂರತ್ ಡಿಸಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಕೀರ್ತಿ ಕಳೆದ 11 ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಜಾರಿ ಬೆನ್ನಲ್ಲೇ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದೇವು. ಕೊನೆಗೂ ಆಕೆಯನ್ನು ಅಹ್ಮದಾಬಾದ್ನಲ್ಲಿ ಬಂಧಿಸಲಾಗಿದೆ. ಶೀಘ್ರದಲ್ಲೇ ಕೋರ್ಟ್ಗೆ ಒಪ್ಪಿಸಿ ಮುಂದಿನ ಕ್ರಮ ತೆಗೆದುಕೊಳ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.
ಕೀರ್ತಿ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳಿವೆ. ಇವುಗಳಲ್ಲಿ 5 ಪ್ರಕರಣಗಳು ಸೂರತ್ ನಗರದಲ್ಲಿ ದಾಖಲಾಗಿವೆ. ಈಕೆ ಸೋಶಿಯ್ ಮೀಡಿಯಾ ಪ್ರಭಾವಿಯಾಗಿ ಕೆಲಸ ಮಾಡ್ತಾಳೆ. ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಸದ್ಯ ಸೂರತ್ನ ಬಿಲ್ಡರ್ ಒಬ್ಬರನ್ನು ಹನಿಟ್ರ್ಯಾಪ್ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.