ಪುತ್ತೂರು: ಸಾಮೆತ್ತಡ್ಕ ನಿವಾಸಿ, ಜಯಂತ್ ಬಿ.ರವರ ಪುತ್ರ ಭರತ್ ಬಿ.ಜೆ.(36ವ) ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಂದೆ ಸಾಮೆತ್ತಡ್ಕದ ಐಡಿಯಲ್ ಸ್ಟೋರ್ ಮಾಲಕ ಜಯಂತ್ ಬಿ., ತಾಯಿ ಯಶೋಧಾ, ಪತ್ನಿ ರಜಿತಾ, ಸಹೋದರ ಕಿರಣ್ ಬಿ.ಜೆ. ಹಾಗೂ ಒಂದೂವರೆ ವರ್ಷದ ಮಗುವನ್ನು ಅಗಲಿದ್ದಾರೆ.