ಪುತ್ತೂರು: ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಇದರ ಪುತ್ತೂರು ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜು.15 ರಂದು ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರಿನ ಇನ್ಲ್ಯಾಂಡ್ ಬಿಲ್ಡಿಂಗ್ ನಲ್ಲಿರುವ ಶಾಖೆಯ ಕಚೇರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿ. ಇದರ ವ್ಯವಸ್ಥಾಪಕ ನಿರ್ದೇಶಕರಾದ ಆಲ್ವಿನ್ ಜೋಯಲ್ ನೊರೊನ್ಹಾ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪುರೋಹಿತರು ವಾಗ್ಮಿಗಳೂ ಆದ ಶ್ರೀ ಕೃಷ್ಣ ಉಪಾಧ್ಯಾಯ, ಉದ್ಯಮಿಗಳಾದ ಶಿವರಾಮ ಆಳ್ವ, ದೀಪಕ್ ಮಿನೇಜಸ್, ನರಸಿಂಹ ಪ್ರಸಾದ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ವಾಗ್ಮಿಗಳಾದ ಮನ್ಮಥ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ವಿಜೆ ವಿಖ್ಯಾತ್ ಮಾಡಲಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಅಧ್ಯಕ್ಷರಾದ ಪುನೀತ್ ವಿಜೆ, ಉಪಾಧ್ಯಕ್ಷರಾದ ಮಾಲತಿ ಮತ್ತು ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.


























