ಉಪ್ಪಿನಂಗಡಿ : ತೆಕ್ಕಾರು ಬಾಜಾರು ಎಂಬಲ್ಲಿ ಗಂಡನಿಂದಲೇ ಪತ್ನಿಯ ಕೊಲೆ ನಡೆದಿರುವ ಘಟನೆ ನಡೆದಿದೆ.
ಬಾಜಾರುವಿನ ರಫೀಕ್(45) ಎಂಬಾತ ತನ್ನ ಪತ್ನಿ ಝೀನತ್ (40) ರನ್ನು ಚಾಕುವಿನಿಂದ ಇರಿದು ಕೊಲೆಗೈದಿರುವುದಾಗಿ ತಿಳಿದುಬಂದಿದೆ.
ತನ್ನ ಮನೆಯಲ್ಲಿ ಮಾತಿಗೆ ಮಾತು ಬೆಳದ ಹಿನ್ನಲೆಯಲ್ಲಿ ಮುಂದುವರಿದ ಭಾಗವಾಗಿ ಪತಿ ಚಾಕುವಿನಿಂದ ಇರಿದು
ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.