ಸುಳ್ಯ: ಆರೋಪಿ ಅಂಕಿತ್ ಪಲಾಯ ದಿನಾಂಕ 22.04.2025 ರಂದು ರಾತ್ರಿ 9:30 ಸಮಯಕ್ಕೆ ಸಮವಸ್ತ್ರದಲ್ಲಿದ್ದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರೊಂದಿಗೆ ಕೆ.ವಿ.ಜಿ. ಜಂಕ್ಷನ್ ಬಳಿ ಅನುಚಿತವಾಗಿ ವರ್ತಿಸಿದ್ದೇ ಅಲ್ಲದೆ ವಾಹನದ ದಾಖಲಾತಿಗಳನ್ನು ಹಾಜರು ಪಡಿಸದೇ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿಕೊಂಡು ಹೋದ ಪ್ರಕರಣವಾಗಿರುತ್ತದೆ.
ಈ ಬಗ್ಗೆ ಆರೋಪಿಯ ಮೇಲೆ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕಲಂ 185 ಮತ್ತು 179 ರಡಿಯಲ್ಲಿ ಲಘು ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಮಾನ್ಯ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಬು ರವರು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ₹10,000/- ದಂಡ ಮತ್ತು ಸಮುದಾಯ ಸೇವೆಯನ್ನು ಆದೇಶಿಸಿರುತ್ತಾರೆ. ಅಪರಾಧಿಯು ದಿನಾಂಕ 19.07.2025 ರಿಂದ 28.07.2025 ರ ವರೆಗೆ ದಿನಂಪ್ರತಿ ಬೆಳಿಗ್ಗೆ 10 ರಂದ 12 ಗಂಟೆಯವರೆಗೆ ಸುಳ್ಯ ಪೊಲೀಸ್ ಠಾಣೆಯ ಆವರಣವನ್ನು ಶುಚಿಗೊಳಿಸುವ ಮೂಲಕ ಸಮುದಾಯ ಸೇವೆ ಮಾಡಲು ಆದೇಶಿಸಲಾಗಿದೆ.
ಹಾಗೆಯೇ ಕಲಂ 179 ರ ಅಪರಾಧಕ್ಕಾಗಿ ₹2,000/- ದಂಡ ವಿಧಿಸಲಾಗಿದೆ.