ಪುತ್ತೂರು : ಕೊರೊನಾ ಲಾಕ್ ಡೌನ್ ಪ್ರಾರಂಭದಿಂದ ಈ ತನಕ ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯಾನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಬೆಳಗ್ಗೆಯ ಮತ್ತು ಸಂಜೆಯ ಉಪಾಹಾರವನ್ನು ನೀಡುತ್ತಿರುವ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಳಿಯ ಸಂಸ್ಥೆಯ ಕೇಶವ ಪ್ರಸಾದ್ ಮುಳಿಯ,ಕೃಷ್ಣ ನಾರಾಯಣ್ ಮುಳಿಯ, ಗೃಹ ರಕ್ಷಕ ದಳದ ಘಟಕಾಧಿಕಾರಿ ಅಭಿಮನ್ಯು ರೈ, ಸಾರ್ಜೆಂಟ್ ಜಗನ್ನಾಥ್ ಪಿ, ಸುದರ್ಶನ್ ಜೈನ್, ದಿವಾಕರ್ ಹೆಚ್. ಜಿ, ಚಂದ್ರ ಕುಮಾರ್, ಅಶೋಕ್ ಉಪಸ್ಥಿತರಿದ್ದರು.