ಪುತ್ತೂರು : ನಗರಸಭೆಯ ಸೂಚನೆಯನ್ನು ಉಲ್ಲಂಘಿಸಿ ಕೃಷ್ಣನಗರದಲ್ಲಿ ಅನಧಿಕೃತವಾಗಿ ಗಾರ್ಬಲ್ ನಡೆಸುತ್ತಿದ್ದ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿ ಎಚ್ಚರಿಕೆ ನೀಡಿದ್ದಾರೆ.
ಖಲಂದರ್ ಶಾಫಿ ನೇತೃತ್ವದಲ್ಲಿ ಗಾರ್ಬಲ್ ನಡೆಸುತ್ತಿದ್ದು ಅಡಿಕೆಗೆ ಸಂಬoಧಿಸಿ ಕೆಲಸ ನಡೆಯುತಿತ್ತು. ಈ ಬಗ್ಗೆ ಕೆಲ ದಿನಗಳ ಹಿಂದೆ ದೂರು ಬಂದಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಾರ್ಬಲ್ ತೆರೆಯದಂತೆ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕವೂ ಮತ್ತೆ ತೆರದಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರೆಯದಂತೆ ತಾಕೀತು ಮಾಡಿದ್ದಾರೆ. ಸೋಮವಾರ ಸ್ಥಳಕ್ಕೆ ಪೌರಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.