ಪುತ್ತೂರು: ಜೂ.21ರಂದು ಸಂಜೆ 3 ಗಂಟೆಗೆ ಸರಿಯಾಗಿ
ಪುತ್ತೂರಿನ ಅಕ್ಷಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ
ಎನ್.ಎಸ್.ಎಸ್. ವತಿಯಿಂದ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದ ವೆಬಿನಾರ್ ಆಯೋಜಿಸಲಾಗಿದ್ದು, ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಎಡಪಡಿತ್ತಾಯ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿ.ವಿ. ಡೀನ್ ಪ್ರೊ. ವಿ. ಗಿರೀಶ್ಚಂದ್ರ ಹಾಗೂ ಅಕ್ಷಯ ಕಾಲೇಜು
ಪುತ್ತೂರಿನ ಅಧ್ಯಕ್ಷರಾದ ಜಯಂತ್ ನಡುಬೈಲು
ಭಾಗವಹಿಸುತ್ತಿದ್ದು, ಅಕ್ಷಯ ಕಾಲೇಜಿನ ಎನ್.ಎಸ್.ಎಸ್.
ಸ್ವಯಂಸೇವಕಿ, ವಿಶ್ವ ಯೋಗ ಚಾಂಪಿಯನ್ ಕು.ಪ್ರಣಮ್ಯ
ಸಿ.ಎ. ಯೋಗ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.