ಪುತ್ತೂರು: ಮತ್ತೆ ತುಳುನಾಡಿನ ಕಲಾವಿದರ ಸಮಾಗಮದ ಹೊಸ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಸ್ವರಾಜ್ ಶೆಟ್ಟಿ,ಲಂಚುಲಾಲ್ ಮತ್ತು ಜೆ ಪಿ ತೂಮಿನಾಡು ಸಾರಥ್ಯದಲ್ಲಿ ಕಟ್ಟೆಮಾರ್ ತುಳು-ಕನ್ನಡ ಚಿತ್ರ ಜ.23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಸ್ತ್ರ ಪ್ರೊಡಕ್ಷನ್ಸ್ ಲಂಚೂಲಾಲ್ ಕೆ ಎಸ್ ನಿರ್ಮಾಣದಲ್ಲಿ, ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದಲ್ಲಿ ಸ್ವರಾಜ್ ಶೆಟ್ಟಿ ಹಾಗೂ ಜೆ ಪಿ ತೂಮಿನಾಡು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಟ್ಟೆಮಾರ್.