ಪುತ್ತೂರು ನಗರಸಭೆಯ ವಾರ್ಡ್ ಸಂಖ್ಯೆ 05 ಬನ್ನೂರು ಮಾರ್ನಡ್ಕ ಅಬ್ದುಲ್ಲಾ ಅವರ ಅಂಗಡಿ ಬದಿಯಿಂದ ನಾರಾಯಣ ಆಚಾರಿ ಅವರ ಮನೆಗೆ ಹೋಗುವ ದಾರಿಯ 100 ಮೀಟರ್ ಇಂಟರ್ ಲಾಕ್ ರಸ್ತೆ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 03 ಆದಿತ್ಯವಾರ ನಡೆಯಿತು.
ಸ್ಥಳೀಯ ನಿವಾಸಿ ನಾರಾಯಣ ಆಚಾರಿ ಹಾಗೂ ಇಸ್ಮಾಯಿಲ್ ಅವರು ರಸ್ತೆಯನ್ನು ರಿಬ್ಬನ್ ಕತ್ತರಿಸುವ ಮುಖೇನ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭಾ ಸದಸ್ಯೆ ಕೆ ಫಾತಿಮತ್ ಝೂರಾ ಮಾತನಾಡಿ ವಾರ್ಡ್ ಸಂಖ್ಯೆ 05 ರಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಅನುಧಾನದಲ್ಲಿ ಅಭಿವೃದ್ದಿ ಕಾರ್ಯಗಳು ನಡೆದಿರುತ್ತದೆ.ಇದಕ್ಕೆ ಸಹಕರಿಸಿದ ನಗರಸಭಾ ಅಧಿಕಾರಿಗಳಿಗೂ, ಗುತ್ತಿಗೆದಾರರನ್ನು,ನಗರಸಭಾ ಸಿಬ್ಬಂದಿ ವರ್ಗದವರಿಗೂ, ಪ್ರಮುಖವಾಗಿ ತನ್ನೊಂದಿಗೆ ಎಲ್ಲಾ ಸಮಯದಲ್ಲೂ ಕೈ ಜೋಡಿಸುವ ಎಸ್ಡಿಪಿಐ ಪಕ್ಷದ ಕಾರ್ಯಕರ್ತರಿಗೂ ಮತದಾರರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ನಗರ ಸಮಿತಿ ಅಧ್ಯಕ್ಷರಾದ ಯಾಹಿಯಾ ಕೂರ್ನಡ್ಕ, ಹಿರಿಯರಾದ ಇಬ್ರಾಹಿಂ ಮೋನುಚ, ಸ್ಥಳೀಯ ನಿವಾಸಿ ಅಬ್ದುಲ್ಲಾ, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಮೊಯ್ದೀನ್ ಹಾಜಿ, ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಸಿರಾಜ್, ಬದ್ರಿಯಾ ಕಮಿಟಿ ಅಧ್ಯಕ್ಷ ಹನೀಫ್,ಬನ್ನೂರು ವಾರ್ಡ್ ಸಂಖ್ಯೆ 05 ಎಸ್ಡಿಪಿಐ ಬೂತ್ ಅಧ್ಯಕ್ಷ ಮಹಮ್ಮದ್ ಹುಸೇನ್, ಸಿಟಿ ಬೂತ್ ಅಧ್ಯಕ್ಷ ಅಬ್ದುಲ್ ಆಸಿಫ್ ಪಿಕೆ, ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝರ್,ಎಸ್ಡಿಪಿಐ ಬನ್ನೂರು ವಾರ್ಡ್ ಅಧ್ಯಕ್ಷ ಪವಾಝ್ ,ಕಾರ್ಯದರ್ಶಿ ಮುಸ್ತಫಾ , ಎಸ್ಡಿಪಿಐ ಕಾರ್ಯಕರ್ತರಾದ ಹಾರಿಸ್ ಪಿಕೆ ,ಸಾಬೀರ್,ಇಬ್ರಾಹಿಂ,ಶರೀಫ್ ಮತ್ತಿತರರು ಉಪಸ್ಥಿತರಿದ್ದರು.
ಇಫಾಝ್ ಬನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.