ಪುತ್ತೂರು: ಇಲ್ಲಿನ ದರ್ಬೆ ವೃತ್ತದ ಬಳಿ ಕಾರ್ಯನಿರ್ವಹಿಸುತ್ತಿರುವ ಇನ್ಫಿನಿಟಿ ಬ್ಯೂಟಿ ಕೇರ್ ನವೀಕರಣಗೊಂಡು ಆ.13 ರಂದು ಶುಭಾರಂಭಗೊಳ್ಳಲಿದೆ.
ನವೀಕೃತ ಸಂಸ್ಥೆಯನ್ನು ಅಶ್ವಿನಿ ಹೋಟೆಲ್ ನ ಮಾಲಕರಾದ ಕರುಣಾಕರ್ ರೈ ದೇರ್ಲ ಮತ್ತು ಉದ್ಯಮಿ ಕೃಷ್ಣವೇಣಿ ಕೆ ರೈ ದೇರ್ಲ ಉದ್ಘಾಟಿಸಲಿದ್ದಾರೆ.
ದೀಪ ಪ್ರಜ್ವಲನೆಯನ್ನು ಪುತ್ತೂರಿನ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಎಚ್, ವಕೀಲರಾದ ಅಕ್ಷತಾ ಡಿ ಶೆಟ್ಟಿ ನೆರವೇರಿಸಲಿದ್ದಾರೆ.
ಕಳೆದ ಐದು ವರುಷಗಳಿಂದ ಗ್ರಾಹಕರು ನಮ್ಮ ಸಂಸ್ಥೆಯ ಜೊತೆ ಕೈಹಿಡಿದು ನಡೆದಿದ್ದು ಆ.13 ರಂದು ಬೆಳಗ್ಗೆ 9.30 ಕ್ಕೆ ನಡೆಯುವ ನಮ್ಮ ನವೀಕೃತ ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಶುಬಹಾರೈಸಬೇಕಾಗಿ ಸಂಸ್ಥೆಯ ಮಾಲಕರಾದ ಶ್ರುತಿ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.