ಕಲ್ಲಡ್ಕ : ವಿಶ್ವ ಹಿಂದು ಪರಿಷತ್, ಭಜರಂಗದಳ ಮತ್ತು ಮಾತೃ ಶಕ್ತಿ ದುರ್ಗಾವಾಹಿನಿ,ಕಲ್ಲಡ್ಕ ಪ್ರಖಂಡ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ಆ.14 ರಂದು ನಡೆಯಲಿದೆ ಎಂದು ವಿ ಹೆಚ್ ಪಿ ಕಲ್ಲಡ್ಕ ಘಟಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಿಂದ ಸಂಜೆ 5.00 ಗಂಟೆಗೆ ಪಂಜಿನ ಮೆರವಣಿಗೆ ಆರಂಭವಾಗಲಿದೆ. ಸಂಜೆ 6.00 ಗಂಟೆಗೆ ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಹಿಂದೂ ಮುಖಂಡ ಶ್ರೀ ಮುರಳಿ ಕೃಷ್ಣ ಹಸಂತಡ್ಕ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಗಾ ಅಣುಸ್ಥಾವರದ ನಿವೃತ್ತ ಅಧಿಕಾರಿ ಶ್ರೀ ದಿವಾಕರ ಅಮ್ಟೂರು ವಹಿಸಲಿದ್ದಾರೆ. ಅಭ್ಯಾಗತರಾಗಿ ಉದ್ಯಮಿ ಶ್ರೀ ಧೀರೇಶ್ ಮೆಲ್ಕಾರು ಮತ್ತು ನಾಗಸುಜ್ಞಾನ ಕಲ್ಲಡ್ಕ ಇದರ ಅಧ್ಯಕ್ಷ ಶ್ರೀ ನಾಗರಾಜ ಬಲ್ಯಾಯ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.