ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಆ.14 ರಂದು ಸಂಜೆ 4:45 ಕ್ಕೆ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಧರ್ಮಸ್ಥಳ ಮಾಹಿತಿ ಕಚೇರಿ ಬಳಿ ಇರುವ ಸಾರ್ವಜನಿಕ ಶೌಚಾಲಯದ ಸುತ್ತಮುತ್ತಲಿನಲ್ಲಿ ಕರೆದುಕೊಂಡು ಬಂದು ಮಹಜರು ನಡೆಸಿದ್ದಾರೆ.
ದೂರುದಾರ ಮೊದಲು ಕೆಲಸ ಮಾಡುತ್ತಿರುವಾಗ ವಾಸವಾಗಿದ್ದ ಜಾಗದಲ್ಲಿ ಕಾನೂನು ಪ್ರಕ್ರಿಯೆಗಾಗಿ ಮಹಜರು ನಡೆಸಲಾಗಿದೆ ಎಂದು SIT ಮೂಲಗಳು ಮಾಹಿತಿ ನೀಡಿದೆ. ಮಹಜರು ವೇಳೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು.