ದಿನಾಂಕ: 12-08-2025 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ, ಸುಮಾರು 31 ಗ್ರಾಂ ಬಂಗಾರ ಮತ್ತು ರೂ.5000/- ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅ.ಕ್ರ:83/2025 ಕಲಂ: 305 ಭಾರತೀಯ ನ್ಯಾಯ ಸಂಹಿತೆ-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿಯಾದ ಪುತ್ತೂರು, ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29)ಎಂಬಾತನನ್ನು ಪುತ್ತೂರು ಈಶ್ವರಮಂಗಲದಲ್ಲಿ ದಸ್ತಗಿರಿ ಮಾಡಲಾಗಿದ್ದು, ಆರೋಪಿಯಿಂದ 30.120 ಗ್ರಾಂ ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.
ಸದ್ರಿ ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಅರುಣ್ ನಾಗೇಗೌಡ ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ರವಿ ಬಿ ಎಸ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಜಂಬುರಾಜ್ ಮಹಾಜನ್ ರವರ ನೇತೃತ್ವದ, ಎಎಸ್‌ಐ ಚಂದ್ರಶೇಖರ್, ಹೆಚ್.ಸಿ 1050 ಪ್ರವೀಣ್, ಹೆಚ್.ಸಿ 396 ಮಧು, ಹೆಚ್.ಸಿ 557 ಹರೀಶ್, ಹೆಚ್.ಸಿ 896 ಸುಬ್ರಹ್ಮಣ್ಯ, ಪಿಸಿ 452 ಆಕಾಶ್, ಪಿಸಿ 455 ಯುವರಾಜ್, ಪಿಸಿ 2394 ಶರಣಪ್ಪ ಪಾಟೀಲ್, ಚಾಲಕರಾದ ಎಆರ್ ಎಸ್ ಐ ಯಜ್ಞ, ಹೆಚ್.ಜಿ ಹರಿಪ್ರಸಾದ್ ಮತ್ತು ಹೆಚ್.ಜಿ ನಿತೇಶ್‌ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿರುತ್ತದೆ.