ಉಪ್ಪಿನಂಗಡಿ : ಅಲೀಮಮ್ಮ, ಪಡುಬೆಟ್ಟು ಮನೆ,ನೆಲ್ಯಾಡಿ ಗ್ರಾಮ, ಕಡಬ ತಾಲೂಕು ಎಂಬವರು ಅವರ ನೆರೆಯ ಪರಿಚಯದ ಮುದರು ಎಂಬವರು ಅಸೌಖ್ಯದಲ್ಲಿರುವುದಾಗಿ ತಿಳಿದು ಅವರನ್ನು ವಿಚಾರಿಸಿಕೊಂಡು ಬರಲು ಮನೆಯಿಂದ ಹೊರಟು ಮನೆಯ ಎದುರು ಹಾದು ಹೋಗುವ ರಸ್ತೆಯ ಬದಿ ರಸ್ತೆ ದಾಟಲು ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ನಿಂತುಕೊಂಡಿರುವ ಸಮಯ ಸುಮಾರು 11.15 ಗಂಟೆಗೆ ಪಡುಬೆಟ್ಟು ಮುಖ್ಯ ರಸ್ತೆಯಿಂದ ಮಸೀದಿ ಕಡೆಗೆ ಹೋಗುತ್ತಿದ್ದ ಬೈಕ್ ಒಂದರಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕನ್ನು ಪಿರ್ಯಾದುದಾರರ ಬಳಿ ನಿಲ್ಲಿಸಿ, ಅವರಲ್ಲಿ ತುಳುವಿನಲ್ಲಿ “ಸಿದ್ದೀಕ್ ನ ಇಲ್ಲ್ ಓಲು, ಪಲ್ಲಿ ಓಲು “ ಎಂದು ಕೇಳಿ, ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಒಮ್ಮಲೇ ಬೈಕಿನಿಂದ ಇಳಿದು, ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸುಮಾರು 10 ಪವನ್ ತೂಕದ ಚಿನ್ನದ ಸರವನ್ನು ಎಳೆದು ಬಲವಂತವಾಗಿ ಕಸಿದುಕೊಂಡು ಹೋಗಿರುತ್ತಾರೆ. ಕಸಿದುಕೊಂಡು ಹೋದ ಚಿನ್ನದ ಸರದ ಅಂದಾಜು ಮೌಲ್ಯ ರೂ 5,22,000/- ಆಗಬಹುದು. ಆದುದರಿಂದ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಹೋದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಿದ್ದು ಇದರಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅಕ್ರ 48-2025 ಕಲಂ 309(4)ಬಿ ಎನ್ ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿರುತ್ತದೆ.
ಪ್ರಕರಣದ ತನಿಖೆಯನ್ನು ಕೈಗೆತ್ತಿ ಕೊಂಡ ಉಪ್ಪಿನಂಗಡಿ ಠಾಣಾ ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತರಾಗಿ ತಂಡವನ್ನು ರಚನೆ ಮಾಡಿಕೊಂಡು ಆರೋಪಿ ಅಬ್ದುಲ್ ರೆಹಮಾನ್ (31 ವರ್ಷ) ತಂದೆ ಅಬ್ದುಲ್ಲ, ಶಾಂತಿನಗರ ಮನೆ ಪೆರಾಜೆ ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ಎಂಬುವವನನ್ನು ಯನ್ನು ದಿನಾಂಕ 17. 8.2025 ರಂದು ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಶಕ್ತಿ ನಗರ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದು ಆರೋಪಿತನಿಂದ ವಶಪಡಿಸಿಕೊಂಡ ಸೋತ್ತುಗಳ ವಿವರ.
1) ಉಪ್ಪಿನಂಗಡಿ ಪೊಲೀಸ್ ಠಾಣಾ ಅ. ಕ್ರ 48/2025 ಪ್ರಕರಣದ ಸುಲಿಗೆ ಮಾಡಿದ 48 ಗ್ರಾಮ ತೂಕದ ಚಿನ್ನದ ಸರ – 1 ಅಂದಾಜು ಮೌಲ್ಯ 454000 ರೂಪಾಯಿಗಳು.
2) ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ – 1 ಅಂದಾಜು ಮೌಲ್ಯ 50000 ರೂಪಾಯಿಗಳು. (ಮೈಸೂರು ನಗರದ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.)
ಆರೋಪಿಯಿಂದ ಒಟ್ಟು 505000 ರೂಪಾಯಿಗಳನ್ನು ಸೋತ್ತನ್ನು ಸ್ವಾಧೀನ ಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಆರೋಪಿ ಪತ್ತೆಗೆ ಮಾನ್ಯ ಪೊಲೀಸ್ ಅಧೀಕ್ಷಕರವರ ಆದೇಶದ ಮೇರೆಗೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಮತ್ತು ಮಾನ್ಯ ಪೊಲೀಸ್ ಉಪಾಧೀಕ್ಷಕರವರ ಮಾರ್ಗದರ್ಶನದಲ್ಲಿ ಮಾನ್ಯ ಪೊಲೀಸ್ ವೃತ್ತ ನಿರೀಕ್ಷಕರವರ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಪತ್ತೆಗೆ ಜಿಲ್ಲಾ ಸಿ. ಡಿ. ಆರ್ ವಿಭಾಗದ ಸಿಬ್ಬಂದಿಗಳು ಸಹಕರಿಸಿರುತ್ತಾರೆ.