ಜೋನ್ಸನ್ ಡೇವಿಡ್ ಸೀಕ್ವೆರ (35),ರವರು ಪುತ್ತೂರಿನ ಸೈಂಟ್ ಪಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ದಿನಾಂಕ 29-08-2025 ರಂದು ಅವರು ತನ್ನ ಮೊಬೈಲ್ ನಲ್ಲಿ ಇನ್ಸ್ಟಾ ಗ್ರಾಮ್ ಖಾತೆಯನ್ನು ಪರಿಶೀಲಿಸುತ್ತಿರುವಾಗ, @tm_bad_karma_990 ಎಂಬ ಇನ್ಸ್ಟ ಗ್ರಾಮ್ ಖಾತೆಯನ್ನು ಬಳಸುತ್ತಿರುವ ವ್ಯಕ್ತಿಯು, ಅವರು ಉಪನ್ಯಾಸಕರಾಗಿರುವ ಕಾಲೇಜಿನಲ್ಲಿ ದಿನಾಂಕ 19-08-2025 ರಂದು ನಡೆದ ನೃತ್ಯ ಕಾರ್ಯಕ್ರಮದಲ್ಲಿ, ಒಂದು ನಿರ್ಧಿಷ್ಟ ಸಮುದಾಯದ ವಿಧ್ಯಾರ್ಥಿನಿಯರು ಭಾಗವಹಿಸಿರುವುದರ ಬಗ್ಗೆ ಅಕ್ಷೇಪ ವ್ಯಕ್ತಪಡಿಸುತ್ತಾ, ಧರ್ಮದ ಆಧಾರದಲ್ಲಿ ವಿವಿಧ ಧರ್ಮಗಳ ನಡುವೆ ವೈಮನಸ್ಸನ್ನು ಉಂಟಾಗುವಂತಹ ಹಾಗೂ ಸುಳ್ಳು ಮಾಹಿತಿ ಹೊಂದಿರುವ ಸಂದೇಶವನ್ನು ಹಾಕಿರುವುದಲ್ಲದೇ, ಸದ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದು ಗಮನಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:77/2025, ಕಲಂ: 196(1)(a)(b) 351(2),352 BNS 2023 ರಂತೆ ಪ್ರಕರಣ ದಾಖಲಾಗಿದೆ.