ಪುತ್ತೂರು ಕೆಮ್ಮಿಂಜೆಯ ಪ್ರವೀಣ್ ನಾಯಕ್ ಮತ್ತು ಅಕ್ಷತಾ ಪ್ರವೀಣ್ ದಂಪತಿಯ ನಾಲ್ಕುವರೆ ವರ್ಷದ ಅಪ್ರಮೇಯ ಪಿ ಎನ್ ಹೆಸರು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿದೆ.
ಅಪ್ರಮೇಯ ಅವರು ಹಲವಾರು ವಿಷಯಗಳನ್ನು ಅತ್ಯಂತ ವೇಗವಾಗಿ ಪಠಿಸುವುದು ಮತ್ತು ಗುರುತಿಸುವ ಪ್ರತಿಭೆಯನ್ನು ಹೊಂದಿದ್ದಾರೆ. ಭಗವದ್ಗೀತೆಯ ಪ್ರಥಮ ಅಧ್ಯಾಯದ ಕೆಲವು ಶ್ಲೋಕಗಳು, ಶ್ರೀರಾಮನ ವಂಶವೃಕ್ಷಗಳು,60 ಸಂವತ್ಸರಗಳು, ಮಾಸಗಳು, ನಕ್ಷತ್ರಗಳು, ಪ್ರಾಣಿಗಳು, ಪಕ್ಷಿಗಳು, ಬಣ್ಣಗಳು,ದೇಹದ ವಿವಿಧ ಭಾಗಗಳು, ತಿಂಗಳುಗಳು, ರಾಶಿಗಳು, ರಾಜ್ಯಗಳು, Gkಪ್ರಶ್ನೋತ್ತರಗಳನ್ನು 18ನಿಮಿಷಗಳಲ್ಲಿ ಪೂರೈಸಿರುವುದ್ದಕ್ಕಾಗಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಅಪ್ರಮೇಯ ಅವರಿಗೆ ಪ್ರಶಸ್ತಿ, ಪದಕದ ಜೊತೆಗೆ ಶ್ಲಾಘನೆಯ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ.
ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅಪ್ರಮೇಯ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದರು.ಇವರು ಅಂಬಿಕಾ ವಿದ್ಯಾಲಯ ಬಪ್ಪಳಿಗೆ ಇಲ್ಲಿಯ LKG ವಿದ್ಯಾರ್ಥಿಯಾಗಿದ್ದಾರೆ.