ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್-28 ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಜರಗುವ ಪುತ್ತೂರುದ ಪಿಲಿಗೊಬ್ಬು,ಫುಡ್ ಫೆಸ್ಟ್-2025 ಇದರ ಪೂರ್ವಭಾವಿ ಸಭೆಯು ದರ್ಬೆಯ ಶ್ರೀ ರಾಮಸೌಧ ಕಟ್ಟಡದಲ್ಲಿ ಜರುಗಿತು.
ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ವಿವಿಧ ಜವಾಬ್ದಾರಿಗಳ ಹಂಚಿಕೆ, ಕಾರ್ಯಕ್ರಮದ ವ್ಯವಸ್ಥೆಗಳ ರೂಪುರೇಷೆಯ ಚರ್ಚೆಯನ್ನು ನಡೆಸಲಾಯಿತು.
ಬಳಿಕ ಸಭೆಯನ್ನುದ್ದೇಶಿಸಿ ವಿಜಯಸಾಮ್ರಾಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರು ಮಾತನಾಡುತ್ತಾ, ಸಂಸ್ಥೆಯು ಈಗಾಗಲೇ ಸಾಮಾಜಿಕ ಚಟುವಟಿಕೆಗಳ ಮೂಲಕ,ಅಶಕ್ತ ಕುಟುಂಬಗಳಿಗೆ ನೆರವು ನೀಡುತ್ತಾ ಹೆಜ್ಜೆಯನ್ನಿಡುತ್ತಿದ್ದು, ತುಳುನಾಡಿನ ಕಲೆ,ಸಂಸ್ಕೃತಿ ಜನಪದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪಿಲಿಗೊಬ್ಬು ಹಾಗೂ ಆಹಾರ ಮೇಳ ಕಾರ್ಯಕ್ರಮವು ಕಳೆದ ಎರಡು ಸೀಝನ್ ನಲ್ಲಿ ಅತ್ಯಂತ ಯಶಸ್ವಿ ಹಾಗೂ ಅದ್ದೂರಿಯಾಗಿ ನೆರವೇರಿದ್ದು ,ಕಲೆ ಸಂಸ್ಕೃತಿ ಉಳಿವಿಗಾಗಿ ಪುತ್ತೂರು ಸೇರಿದಂತೆ ಹತ್ತೂರಿನ ಜನತೆ ಉತ್ತಮ ಸಹಕಾರ, ಸ್ಪಂದನೆ ನೀಡುತ್ತಿರುವುದು ಸಂಸ್ಥೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಈ ಬಾರಿಯ ಸೀಸನ್-3 ಅತ್ಯಂತ ವಿಶಿಷ್ಟ ಹಾಗೂ ವಿನೂತನ ಶೈಲಿಯಲ್ಲಿ ಹೊಸರೂಪುರೇಷೆಯೊಂದಿಗೆ ಜರಗಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಸಭೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್,ಸಂಚಾಲಕರಾದ ಶ್ರೀ ನಾಗರಾಜ್ ನಡುವಡ್ಕ,ಕಾರ್ಯಾಧ್ಯಕ್ಷರಾದ ಶ್ರೀ ಸುಜಿತ್ ರೈ ಪಾಲ್ತಾಡು,ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕೂರೇಲು,ಉಪಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಈಶಾನ್ಯ,ಶ್ರೀ ರತನ್ ರೈ ಕುಂಬ್ರ,ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಪಿದಪಟ್ಲ,ಶರತ್ ಕುಮಾರ್ ಮಾಡಾವು, ದಿನೇಶ್ ವಾಸುಕಿ, ಪವನ್ ಕಂಬಳತ್ತಡ್ಡ,ಜೊತೆ ಕಾರ್ಯದರ್ಶಿಗಳಾದ ಧನುಷ್ ಹೊಸಮನೆ,ಆನಂದ ತೆಂಕಿಲ,ಸಹಸಂಚಾಲಕ ರಾಜೇಶ್ ರೈ ಪರ್ಪುಂಜ,ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ರೈ, ಆದರ್ಶ್ ಶೆಟ್ಟಿ ಉಪ್ಪಿನಂಗಡಿ,ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಗೌಡ ಸಮಿತಿಯ ಸದಸ್ಯರಾದ ಪ್ರದೀಪ್ ಕರ್ನೂರು,ನಿತೇಶ್ ಪೆಲಪ್ಪಾಲ್,ನವೀನ್ ಗೌಡ,ಮೋಹನ್ ಕಬಕ,ಪ್ರೀತಮ್ ಶೆಟ್ಟಿ ಪೆರ್ನೆ,ಆದೇಶ್ ಶೆಟ್ಟಿ, ಪ್ರದೀಪ್ ರೈ ಮಾಡಾವು,ಸಚಿನ್ ಶೆಟ್ಟಿ ಪಟ್ಟೆ, ಚರಣ್ ಕುಲಾಲ್,ಹರೀಶ್ ಕುಲಾಲ್ ಬೆದ್ರಾಳ,ಗೌತಮ್ ಗೌಡ,ಜಗದೀಶ್ ಜೆ.ಆರ್ ನಾಯಕ್,ಪ್ರಜ್ವಲ್ ಎಂ.ಎಸ್ ಪುತ್ತೂರು, ಭರತ್ ಚನಿಲ,ಮಹೇಶ್ ಆಚಾರ್ಯ, ಉಮೇಶ್ ಹಡೀಲ್,ಸುದರ್ಶನ ರೈ ನೀರ್ಪಾಡಿ,ಕಿಶನ್ ರೈ,ಅಭಿಷ್ ಕೊಳಕೆಮಾರು,ಚರಣ್ ರೈ ಮಠ,ನವೀನ್ ಪಡ್ನೂರು,ಹರ್ಷರಾಜ್, ಅಭಿಷೇಕ್ ಯಾದವ್ ಸೇರಿದಂತೆ ವಿಜಯಸಾಮ್ರಾಟ್ ಚಾರಿಟೇಬಲ್ ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.