ಪುತ್ತೂರು : ನಿವೇಶನದ ಹೆಸರಿನಲ್ಲಿ ವಂಚಿಸಿದ ಪ್ರಕರಣದಲ್ಲಿ ಮುಂಡೂರು ಗ್ರಾಮದ ಕೆರೆಮನೆ ಲೋಕಪ್ಪ ಗೌಡ ಅವರ ಪುತ್ರ ಭರತ್ ಕುಮಾರ್ ನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಮತ್ತು ನಗರ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಶಾಂತಿನಗರ ಬೆಂಗಳೂರು ಪ್ರಕರಣದಲ್ಲಿ ಭರತ್ ಕುಮಾರ್ ಎಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ರವಿ ಬಿ. ಎಸ್ ಮತ್ತು ಉಪ ನೀರಿಕ್ಷಕ ಜಂಬೂ ರಾಜ್ ಬಿ.ಮಹಾಜನ್ ಮತ್ತು ಸುಷ್ಮಾ ಜಿ ಭಂಡಾರಿ ಅವರ ನಿರ್ದೇಶನದಲ್ಲಿ ಠಾಣಾ ಹೆಚ್ ಸಿ ಲಪ್ರವೀಣ್ ರೈ, ಹೆಚ್ ಸಿ ಹರೀಶ್, ಪಿಸಿ ಚೋಳಪ್ಪ ಸಂಶಿ ಅವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜಾರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿದೆ.