ಪುತ್ತೂರು: ಸ್ನೇಹಿತರಿಬ್ಬರು ಕಾಣೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಸ್ನೇಹಿತರಾದ ಪುತ್ತೂರಿನ ಒಳಮೊಗ್ರು ನಿವಾಸಿ ಮೋನಿಶಾ(23) ಮತ್ತು ಮಂಡ್ಯ ಪಾಂಡವಪುರ ನಿವಾಸಿ ದಿವ್ಯ(20) ನಾಪತ್ತೆಯಾದ ಯುವತಿಯರು.
ಇಬ್ಬರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ನಾಲ್ಕು ದಿನಗಳ ಹಿಂದೆ ಇಬ್ಬರು ಪುತ್ತೂರಿನ ಮೋನಿಶಾ ಮನೆಗೆ ಬಂದಿದ್ದರು. ಬಳಿಕ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರಿಗೂ ಮಾತನಾಡಲು ಆಗುವುದಿಲ್ಲ ಮತ್ತು ಡಫ್ ಅಂಡ್ ಡಮ್ ಮೂಲಕ ಮಾತನಾಡುತ್ತಾರೆ. ಮತ್ತು ಇವರ ಮಾಹಿತಿ ಇದ್ದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ 9480805363 , 9480805300