ಅಂತಾರಾಷ್ಟ್ರೀಯ ಸಂಸ್ಥೆ ಜೆಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ವಲಯ 15ರ ವಲಯ ಸಮ್ಮೇಳನ ಕಹಳೆ 2025 ಸುಲ್ತಾನ್ ಬತ್ತೆರಿಯ ಸ್ವಸ್ತಿಕ ವಾಟರ್ ಫ್ರಂಟ್ ನಲ್ಲಿ ಜೆಸಿಐ ಸಾಮ್ರಾಟ್ ಆತಿತ್ಯ ದಲ್ಲಿ ದಿನಾಂಕ ಅಕ್ಟೋಬರ್ 18&19ರಂದು ನಡೆಯಿತು.
ಈ ಸಮ್ಮೇಳನದಲ್ಲಿ 2026ರ ವಲಯ ಅಧ್ಯಕ್ಷರ ಚುನಾವಣೆಯಲ್ಲಿ ಜೆಸಿಐ ವಿಟ್ಲದ ಅಭ್ಯರ್ಥಿ ಜೆಸಿ ಸಂತೋಷ್ ಶೆಟ್ಟಿಯವರು ಕಾರ್ಕಳ ಜೆಸಿಐ ಅಭ್ಯರ್ಥಿ ಜೆಸಿ ವಿಘ್ನೇಶ್ ವಿರುದ್ಧ ಒಟ್ಟು 223ಮತಗಳಲ್ಲಿ 140ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.