ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಜಾನುವಾರುಸಾಗಾಟ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಅ.22 ರಂದು ದಾಖಲಾದ ಪ್ರಕರಣದ ವಿಚಾರಣೆಯ ಘಟನೆಯನ್ನು ಎಲ್ಲರೂ ವಿಮರ್ಶೆ ಮಾಡಬಹುದು ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡುಬಂದಲ್ಲಿ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ವಾಹನವನ್ನು ಹಿಂಬಾಲಿಸಿ ಬಳಿಕ ನಿಲ್ಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ವಾಹನ ನಿಲ್ಲಿಸುವಲ್ಲಿ ಯಾವುದೇ ಸಂಸ್ಥೆಯ ಪಾತ್ರ ಇರುವುದಿಲ್ಲ ಅಥವಾ ಯಾವ ಸಂಸ್ಥೆಯ ಸಹಕಾರವನ್ನು ಪೊಲೀಸರು ತೆಗೆದುಕೊಂಡಿರುವುದು ಕಂಡು ಬಂದಿರುವುದಿಲ್ಲ.
ನ್ಯಾಯಸಮ್ಮತ ತನಿಖೆಗಾಗಿ ಪ್ರಕರಣವನ್ನು ಮರು ದಿನವೇ ಪುತ್ತೂರು ಉಪವಿಭಾಗದ ವ್ಯಾಪ್ತಿಯಿಂದ ವರ್ಗಾಯಿಸಲಾಯಿತು. ಈ ಘಟನೆಯ ನಂತರ ಪಿಎಸ್‌ಐ ಬೆಳ್ಳಾರೆ ಹಾಗೂ ಸಿಬ್ಬಂದಿಗಳು ಘಟನಾ ತನಿಖಾ ಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಗಾಯಗೊಂಡ ಆರೋಪಿಯನ್ನು
ತೆರವು ಆಸತ್ರೆಗೆ ಸಾಗಿಸುವಲ್ಲಿ ಸಹಕರಿಸುತ್ತಿದ್ದರು, ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ
ಬಂದು, ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಆದ್ದರಿಂದ ಅದರಲ್ಲಿ ಇರುವ ಜಾನುವಾರುಗಳನ್ನು ಇಳಿಸಬಹುದೇ ಎಂದು ಕೇಳಿರುವುದಾಗಿ ಗೊತ್ತಾಗಿರುತ್ತದೆ.
ನಂತರ ಕಾನ್ಸೆಬಲ್‌ರವರು ಇನ್‌ಸ್ಪೆಕ್ಟರ್ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್ ಪುತ್ತಿಲ ಕಾಸ್ಟೇಬಲ್ ಅವರಲ್ಲಿ ಮೊಬೈಲ್ ಕೇಳಿ ಪಡೆದುಕೊಂಡು ಇನ್ಸೆಕ್ಟರ್ ಜೊತೆ ಮಾತನಾಡಿರುವುದಾಗಿದೆ. ಅದಕ್ಕೆ ಇನ್ಸೆಕ್ಟರ್‌ರವರು ಅನುಮತಿ ಕೊಟ್ಟಿರುತ್ತಾರೆ ಎಂದು ಕಂಡು ಬಂದಿರುತ್ತದೆ.
ನಂತರ ಪೊಲೀಸರ ಜೊತೆಗೆ ಸ್ಥಳೀಯರು ಹಾಗೂ ಅರುಣ್ ಕುಮಾರ್ ಪುತ್ತಿಲ ಜಾನುವಾರುಗಳನ್ನು ವಾಹನದಿಂದ ಇಳಿಸುವ ಕೆಲಸ ಮಾಡಿರುವುದಾಗಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯು ಬೇರೆಯದೇ ರೀತಿಯಲ್ಲಿ ಪ್ರಚಾರಗೊಂಡಿರುತ್ತದೆ. ಜಾನುವಾರುಗಳ ಇನ್ನಷ್ಟು ಸಾವನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ನಿರೀಕ್ಷಕರು ಅನುಮತಿ ಕೊಟ್ಟಿರುವುದು ಕಂಡುಬಂದಿರುತ್ತದೆ. ಈ ಪ್ರಕರಣದಲ್ಲಿ, ಯಾವುದೇ ಧಾರ್ಮಿಕ ಸಂಘಟನೆ ಅಥವಾ ವ್ಯಕ್ತಿಯೊಂದಿಗೆ ಪೊಲೀಸರ ಯಾವುದೇ ಸಹಭಾಗಿತ್ವ ಅಥವಾ ದುರುದ್ದೇಶ ಕಂಡುಬಂದಿಲ್ಲ.
ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶವಿರುವ ತಪ್ಪು ನಿರ್ಣಯ ತೆಗೆದುಕೊಂಡಿರುವುದು ಇನ್ನೆಕ್ಟರ್ ಅವರದ್ದು ತಪ್ಪಾಗಿರುವುದರಿಂದ ಇನ್ಸ್‌ಪೆಕ್ಟರ್‌ಗೆ ಚಾರ್ಜ್ ಮೆಮೊ ನೀಡಲಾಗುತ್ತದೆ. ಮುಂದಿನ ದಿವಸಗಳಲ್ಲಿ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ಮಾಡಲು ಅವಕಾಶ ನೀಡದೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಸ್ಪಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























