ವಿಟ್ಲ: ದ.ಕ ಗ್ಯಾರೇಜ್ ಮಾಲಕರ ಸಂಘ (ರಿ.) ಮಂಗಳೂರು ಇದರ ವಿಟ್ಲ ವಲಯದ ಮಹಾಸಭೆ : ಪದಗ್ರಹಣ ಸಮಾರಂಭ ಅ.26 ರಂದು ಚಂದಳಿಕೆಯ ಭಾರತ್ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಸಭಾಧ್ಯಕ್ಷತೆಯನ್ನು ವಿಟ್ಲ ವಲಯದ ಅಧ್ಯಕ್ಷರಾದ ಲಿಯೋ ಡಿ ಲಾಸ್ರಾದೋ , ದೀಪ ಪ್ರಜ್ವಲನೆಯನ್ನು ಜೂನಿಯರ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಎಚ್ ಸುಬ್ರಹ್ಮಣ್ಯ ಭಟ್, ನುಡಿತೋರಣ ವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷರಾದ ದಯಾನಂದ ಜಿ ಕತ್ತಲ್ ಸಾರ್ ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ದ.ಕ ಗ್ಯಾರೇಜ್ ಮಾಲಕರ ಸಂಘ (ರಿ.) ಮಂಗಳೂರು ಇದರ ಅಧ್ಯಕ್ಷ ದಿನಕರ್ ಕುಲಾಲ್, ಛೇರ್ಮನ್ ದಿವಾಕರ ಎಂ , ಸ್ಥಾಪಕರು ಜನಾರ್ದನ ಅತ್ತಾವರ, ಲಯನ್ಸ್ ಕ್ಲಬ್ ವಿಟ್ಲದ ಅಧ್ಯಕ್ಷ ಸಂಜೀವ ಪೂಜಾರಿ, ಪೊಲೀಸ್ ಇನ್ಸ್ಪೆಕ್ಟರ್ ರಫೀಕ್ ಕೆ ಎಂ ಭಾಗವಹಿಸಲಿದ್ದಾರೆ.




























