ದಿನಾಂಕ: 05.11.2025 ರಂದು ಸಂಜೆ, ಆಂಜನೇಯ ರೆಡ್ಡಿ ಜಿ.ವಿ, ಪೊಲೀಸ್ ಉಪನಿರೀಕ್ಷಕರು, ಪುತ್ತೂರು ನಗರ ಠಾಣೆರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಪುತ್ತೂರು ತಾಲೂಕು ಕಬಕ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಾಲ್ವರು ವ್ಯಕ್ತಿಗಳು ಅನುಚಿತವಾಗಿ ವರ್ತಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಸ್ಥಳಕ್ಕೆ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿದ್ದ ನಾಲ್ವರು ವ್ಯಕ್ತಿಗಳನ್ನು ತಡೆದು ವಿಚಾರಿಸಲಾಗಿ ಅವರುಗಳು ಯಾವುದೋ ಮಾಧಕ ವಸ್ತುವನ್ನು ಸೇವಿಸಿದವನಂತೆ ಕಂಡುಬಂದಿರುತ್ತಾರೆ. ಪಿರ್ಯಾದಿದಾರರು ಅವರನ್ನು ವಿಚಾರಿಸಲಾಗಿ ಅವರು ಮಾದಕ ದ್ರವ್ಯ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಅವರನ್ನು ದಿನಾಂಕ: 05.11.2025 ರಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಿಷೇದಿತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ನಾಲ್ವರು ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ: 105/2025 ಕಲಂ-27(b) NDPS Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿಗಳ ವಿವರ:
1) ಮುಬಾರಕ್ ಪ್ರಾಯ 21 ವರ್ಷ, ವಾಸ:ನೆಕ್ಕಿಲಾಡಿ ಗ್ರಾಮ, ಪುತ್ತೂರು.
2) ಹಿತೇಶ್, ಪ್ರಾಯ 21 ವರ್ಷ, ತಂದೆ: ವಾಸು ಪೂಜಾರಿ ವಾಸ:ಬಿಳಿಯೂರು ಗ್ರಾಮ, ಬಂಟ್ವಾಳ.
3) ಅಬ್ದುಲ್ ಅನಾಸ್, ಪ್ರಾಯ 21 ವರ್ಷ, ವಾಸ: ನೆಕ್ಕಿಲಾಡಿ ಗ್ರಾಮ, ಪುತ್ತೂರು.
4) ಉಮ್ಮರ್ ಫಾರೂಕ್, ಪ್ರಾಯ 41 ವರ್ಷ, ವಾಸ-ಕಬಕ ಗ್ರಾಮ, ಪುತ್ತೂರು.



























